ಕಳೆದ ಎರಡು ತಿಂಗಳಲ್ಲಿ 7 ಮಕ್ಕಳು ಸೇರಿ 8 ಮಂದಿಯನ್ನು ಕೊಂದಿದ್ದ ತೋಳವನ್ನು ಕೊನೆಗೂ ಉತ್ತರ ಪ್ರದೇಶದ ಬಹರೀಚ್ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದೆ.
6 ತೋಳಗಳ ಹಿಂಡಿನಲ್ಲಿದ್ದ ಈ ತೋಳ ಮಂಗಳವಾರ ಮತ್ತೊಂದು ದಾಳಿ ಮಾಡಿ 3 ವರ್ಷದ ಮಗುವನ್ನು ಕೊಂದು ಮೂರು ಮಕ್ಕಳನ್ನು ಗಾಯಗೊಳಿಸಿತ್ತು. ಇದರಿಂದ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಸಿಡಿಮದ್ದು ಬಳಸಿ ತೋಳ ಬಲೆ ಹಾಕಿದ್ದ ನಿಗದಿತ ಜಾಗಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಬಲೆಯೊಳಗೆ ಬಿದ್ದ ತೋಳವನ್ನು ಸೆರೆ ಹಿಡಿದು ಮೃಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ತೋಳಗಳ ಹಿಂಡು ಗ್ರಾಮದಿಂದ ಗ್ರಾಮಕ್ಕೆ ತೆರಳುತ್ತಾ ದಾಳಿ ಮಾಡಿ ಮಕ್ಕಳನ್ನು ಕೊಂದು ತಿನ್ನುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಈ ತೋಳಗಳನ್ನು ಬೆನ್ನತ್ತಲು ಡ್ರೋಣ್ ಬಳಕೆ ಮಾಡಿದ್ದರು.
`ಆಪರೇಷನ್ ಬೇಡಿಯಾ’ ಹೆಸರಿನ ಕಾರ್ಯಾಚರಣೆಗೆ 16 ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಬಹರೀಚ್ ಜಿಲ್ಲೆಯ ಮೆಹ್ಸಿ ಬಳಿಯ ಬಲೆ ಹೆಣೆದಿದ್ದರು. ಆನೆಯ ಹೇಳು ಮತ್ತು ಮೂತ್ರವನ್ನು ಬಳಸುವ ಮೂಲಕ ತೋಳಗಳ ದಾರಿ ತಪ್ಪಿಸಿದ್ದರು.
ಆನೆಯ ಲದ್ದಿಯೊಳಗೆ ಸಿಡಿಮದ್ದುಗಳನ್ನು ಇರಿಸಿ ಸ್ಫೋಟಿಸಲಾಯಿತು. ಇದರಿಂದ ತೋಳಗಳು ಒಂದೇ ದಿಕ್ಕಿನತ್ತ ಹೋಗುವಂತೆ ಮಾಡಲಾಯಿತು.
#WATCH | Uttar Pradesh: Bahraich Forest Department catches the wolf that killed 8 people in Bahraich.
(Video Source: Bahraich Forest Department) pic.twitter.com/qaGAkblyE4
— ANI (@ANI) August 29, 2024