Friday, November 22, 2024
Google search engine
Homeಅಪರಾಧ8 ಮದುವೆ, ಸಾಲ ಕೊಡಿಸ್ತೀನಿ ಅಂತ 38 ಕೋಟಿ ವಂಚಿಸಿದ ನಕಲಿ ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಾಧ್ಯಕ್ಷೆ!

8 ಮದುವೆ, ಸಾಲ ಕೊಡಿಸ್ತೀನಿ ಅಂತ 38 ಕೋಟಿ ವಂಚಿಸಿದ ನಕಲಿ ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಾಧ್ಯಕ್ಷೆ!

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು 8 ಮದುವೆ ಆಗಿದ್ದೂ ಅಲ್ಲದೇ ಸಾಲ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ಸಿಕ್ಕಿಬಿದ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಉಡುಪಿ ನಿವಾಸಿ ತಬುಸುಮ್ ತಾಜ್ (40) 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ.

ಮದುವೆಯಾಗಿ ಹೆಂಡತಿಯಿಂದ ಅಂತರ ಕಾಯ್ದುಕೊಂಡ ಹಣ ಹೊಂದಿರುವ ಗಂಡಸರನ್ನೇ ಟಾರ್ಗೆಟ್ ಮಾಡುತ್ತಿದ್ದ ತಬುಸುಮ್ ತಾಜ್, ಹೀನಾ ಎಂಟರ್‍ಪ್ರೈಸಸ್ ಹೆಸರಲ್ಲಿ ಕಚೇರಿ ತೆರೆದು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಡಿಸುತ್ತೇನೆ ಎಂದು ಜನರನ್ನು ನಂಬಿಸುತ್ತಿದ್ದಳು.

18 ವರ್ಷದಿಂದ ಕಚೇರಿ ನಡೆಸುತ್ತಿದ್ದ ತಬುಸುಮ್ ತಾಜ್ ವಿಧಾನಸಭಾಧಕ್ಷ ಯುಟಿ ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನ ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು, 15 ಲಕ್ಷ ರೂ. ಕೊಟ್ಟರೆ 10 ದಿನದಲ್ಲಿ 1 ಕೋಟಿ ರೂ. ಸಾಲವನ್ನು ಬ್ಯಾಂಕ್ ನಲ್ಲಿ ಕೊಡಿಸುತ್ತೇನೆ ಎಂದು ಹಲವರಿಗೆ ವಂಚಿಸಿದ್ದಾಳೆ.

ರಾಜ್ಯಾದ್ಯಂತ 38 ಕೋಟಿ ರೂ.ಗೂ ಅಧಿಕ ಹಣವನ್ನು ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳು. ಅಲ್ಲದೇ ಚೆಕ್ ಬರೆಸಿಕೊಂಡು ಚೆಕ್ ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆಯನ್ನು ಹಾಕಿದ್ದಳು ಎಂದು ತಿಳಿದು ಬಂದಿದೆ.

ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಮಹಿಳೆಯನ್ನು ಪ್ರಶ್ನಿಸಿದ್ದು, ಆತನ ಮೇಲೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ. ಮಹಿಳೆಯ ಮೇಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಕೇಸ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments