ಮಕ್ಕಳನ್ನು ನೋಡಿಕೊಳ್ಳುವ ನೆಪದಲ್ಲಿ 60ಕ್ಕೂ ಹೆಚ್ಚು ಬಾಲಕಿಯರ ಮೇಲೆ ಶಿಶುಪಾಲನ ಕೇಂದ್ರದ ನೌಕರ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದ್ದು, ಇದು ಆಸ್ಟ್ರೇಲಿಯಾದ ಇತಿಹಾಸದಲ್ಲೇ ಅತ್ಯಂತ ಹೀನಾಯ ಕೃತ್ಯ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ ಮತ್ತು ಇಟಲಿಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ದೃಢಪಟ್ಟಿದ್ದು, ಶಿಶಿಪಾಲನಾ ಕೇಂದ್ರದ ಮಾಜಿ ನೌಕರ ಆಶ್ಲೆ ಪಾಲ್ ಗ್ರಾಫಿತ್ ವಿರುದ್ಧ ಆಸ್ಟ್ರೇಲಿಯಾದ ನ್ಯಾಯಾಧೀಶರು 307 ಪುಟಗಳ ಚಾರ್ಜ್ ಶೀಟ್ ಓದಿ ಕರಾಳ ಘಟನೆಯ ವಿವರಗಳನ್ನು ಬಿಚ್ಚಿಟ್ಟರು.
ಬ್ರಿಸ್ಬೇನ್ ನ್ಯಾಯಾಲಯದ ನ್ಯಾಯಾಧೀಶ ಅಂಥೋನಿ ರಾಫ್ಟರ್, ಸಂತ್ರಸ್ತ ಮಕ್ಕಳು ಮತ್ತು ಪೋಷಕರ ಮುಂದೆ ಸುಮಾರು ಎರಡೂವರೆ ಗಂಟೆಗಳ ಕಾಲ ಚಾರ್ಜ್ ಶೀಟ್ ವಿವರ ಓದಿದರು.
46 ವರ್ಷದ ಆಶ್ಲೆ ಪಾಲ್ ಗ್ರಾಫಿತ್ ವಿರುದ್ಧ ಕಳೆದ ವರ್ಷ ಆಸ್ಟ್ರೇಲಿಯಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. 2022ರಲ್ಲಿ ಈತನನ್ನು ಬಂಧಿಸಿದಾಗ 91 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರುಗಳು ಬಂದಿದ್ದು, 1623 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಕೆಲವರು ದೂರು ವಾಪಸ್ ಪಡೆದಿದ್ದರಿಂದ ಈ ಸಂಖ್ಯೆ 60ಕ್ಕೆ ಇಳಿದಿತ್ತು.
ಆಶ್ಲೆ 2003ರಿಂದ 2022ರ ಅವಧಿಯಲ್ಲಿ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದು, ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶರು, ಶೀಘ್ರದಲ್ಲೇ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.