Thursday, September 19, 2024
Google search engine
Homeಕ್ರೀಡೆಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ: ಕೂಟ ದಾಖಲೆ ಬರೆದ ಸಮಿತ್!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ: ಕೂಟ ದಾಖಲೆ ಬರೆದ ಸಮಿತ್!

ಭಾರತದ ಸಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಪುರುಷರ ಎಫ್-64 ವಿಭಾಗದ ಫೈನಲ್ ನಲ್ಲಿ ಸಮಿತ್ 70.59 ಮೀ. ದೂರ ಎಸೆದು ಕೂಟ ದಾಖಲೆ ಬರೆದರು. ಈ ಮೂಲಕ ಭಾರತಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಡ್ಮಿಂಟನ್ ನಲ್ಲಿ ನಿತೇಶ್ ಕುಮಾರ್ ಭಾರತಕ್ಕೆ 2ನೇ ಚಿನ್ನದ ಪದಕ ತಂದುಕೊಟ್ಡಿದ್ದರು. ಅಲ್ಲದೇ ಒಂದೇ ದಿನ ಭಾರತಕ್ಕೆ 2 ಚಿನ್ನದ ಪದಕ ಬಂದಿರುವುದು ಇದೇ ಮೊದಲು.

ಹರಿಯಾಣದ ಸೋನಾಪೇಟೆ ಮೂಲದ 26 ವರ್ಷದ ಸಮಿತ್ ಅಂಕಲ್ ಸತತ 2ನೇ ಬಾರಿ ಚಿನ್ನದ ಪದಕ ಗೆದ್ದ ಮೊದಲಿಗ ಎಂಬ ಇತಿಹಾಸ ನಿರ್ಮಿಸಿದ್ದಾರೆ. 3 ವರ್ಷಗಳ ಹಿಂದೆ ನಡೆದ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಸಮಿತ್ ಚಿನ್ನದ ಪದಕ ಗೆದ್ದಿದ್ದರು.

ಟೊಕಿಯೊದಲ್ಲಿ 68.55 ಎಸೆದಿದ್ದ ಸಮಿತ್ ಈ ಬಾರಿ 70.59 ಮೀ. ಎಸೆದು ಕೂಡ ದಾಖಲೆ ಬರೆದರು. ಆದರೆ ಸಮಿತ್ 73.29 ಮೀ. ವಿಶ್ವದಾಖಲೆ ತಮ್ಮ ಹೆಸರಲ್ಲಿಯೇ ಉಳಿಸಿಕೊಂಡಿದ್ದಾರೆ.

ಅವಾನಿ ನಂತರ ಒಲಿಂಪಿಕ್ಸ್ ಚಾಂಪಿಯನ್ ಪಟ್ಟ ಉಳಿಸಿಕೊಂಡ 2ನೇ ಭಾರತೀಯ ಕ್ರೀಡಾಪಟು ಸಮಿತ್ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments