ಪಾಕಿಸ್ತಾನ ನೆಲದಲ್ಲಿ ಇದೇ ಮೊದಲ ಬಾರಿ 2-0ಯಿಂದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ನಿಂದ ಗೆದ್ದು ಬಾಂಗ್ಲಾದೇಶ ತಂಡ ಇತಿಹಾಸ ಬರೆದಿದೆ.
ಪಾಕಿಸ್ತಾ ತಂಡವನ್ನು 2ನೇ ಟೆಸ್ಟ್ ನಲ್ಲಿ 6 ವಿಕೆಟ್ ಗಳಿಂದ ಸೋಲಿಸಿದ ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತು. ಇದರೊಂದಿಗೆ ಏಷ್ಯಾದ ದೇಶವೊಂದನ್ನು ಅದರದ್ದೇ ನೆಲದಲ್ಲಿ ಮೊದಲ ಬಾರಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.
ಬಾಂಗ್ಲಾದೇಶ ಈ ಹಿಂದೆ ವೆಸ್ಡ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತ್ತು. ಪಾಕಿಸ್ತಾನ 2022ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಸೋತ ನಂತರದ ಮತ್ತೊಂದು ಸೋಲಿನ ಆಘಾತಕ್ಕೆ ಒಳಗಾಗಿದೆ.
ಮೊದಲ ಇನಿಂಗ್ಸ್ ನಲ್ಲಿ ಪಾಕಿಸ್ತಾನ 274 ರನ್ ಗೆ ಆಲೌಟಾದರೆ, ಬಾಂಗ್ಲಾದೇಶ 26 ರನ್ 6 ವಿಕೆಟ್ ಕಲೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಲಿಟ್ಮಸ್ ದಾಸ್ ಶತಕ ಸಿಡಿಸಿ ತಂಡವನ್ನು 264 ಗಡಿ ತಲುಪಿಸಿದರು.
ಎರಡನೇ ಇನಿಂಗ್ಸ್ ನಲ್ಲಿ ಪಾಕಿಸ್ತಾನ ತಂಡವನ್ನು 174 ರನ್ ಗಳಿಗೆ ಕಟ್ಡಿ ಹಾಕಿದ ಬಾಂಗ್ಲಾದೇಶ 185 ರನ್ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.