ಭಾರತದ ಕ್ರೀಡಾಪಟುಗಳು 29 ಪದಕದೊಂದಿಗೆ ಗರಿಷ್ಠ ಸಾಧನೆಯೊಂದಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಅಭಿಯಾನ ಅಂತ್ಯಗೊಳಿಸಿದೆ.
ಭಾನುವಾರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂದ ಅಂತಿಮ ದಿನವಾಗಿದ್ದು, ಭಾರತ 3 ಪದಕಗಳ ನಿರೀಕ್ಷೆ ಮಾಡಲಾಗಿತ್ತು. ಇದರಿಂದ 30 ಗಡಿ ತಲುಪುವ ವಿಶ್ವಾಸದಲ್ಲಿತ್ತು. ಆದರೆ 2 ಪದಕ ಬಂದಿತು. ವಿಶೇಷ ಅಂದರೆ ಜಾವೆಲಿನ್ ವಿಭಾಗದಲ್ಲಿ ಗೆದ್ದಿದ್ದ ಬೆಳ್ಳಿ ಪದಕ ಚಿನ್ನದ ಪದಕವಾಗಿ ಬದಲಾಯಿತು.
ಭಾರತದ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚು ಸೇರಿದಂತೆ 29 ಪದಕದೊಂದಿಗೆ 18ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಗರಿಷ್ಠ ಸಾಧನೆಯಾಗಿದೆ. ಟೊಕಿಯೊ ಒಲಿಂಪಿಕ್ಸ್ ನಲ್ಲಿ 19 ಪದಕ ಗೆದ್ದಿದ್ದೇ ಇದುವರೆಗಿನ ಗರಿಷ್ಠ ಸಾಧನೆಯಾಗಿತ್ತು.
ಚೀನಾ 94 ಚಿನ್ನ, 75 ಬೆಳ್ಳಿ, 49 ಕಂಚು ಸೇರಿದಂತೆ 218 ಪದಕದೊಂದಿಗೆ ಅಗ್ರಸ್ಥಾನ ಪಡೆಯಿತು. ಬ್ರಿಟನ್ 48 ಚಿನ್ನ, 43 ಬೆಳ್ಳಿ ಹಾಗೂ 31 ಕಂಚು ಸೇರಿದಂತೆ 122 ಪದಕದೊಂದಿಗೆ ಎರಡನೇ ಸ್ಥಾನ ಗಳಿಸಿತು. ಅಮೆರಿಕ 36 ಚಿನ್ನ 41 ಬೆಳ್ಳಿ ಹಾಗೂ 26 ಕಂಚು ಒಳಗೊಂಡಂತೆ 103 ಪದಕಗಳೊಂದಿಗೆ 3ನೇ ಸ್ಥಾನ ಪಡೆಯಿತು.
ಈ ಮೂರೂ ರಾಷ್ಟ್ರಗಳು 100ಕ್ಕಿಂತ ಅಧಿಕ ಪದಕ ಗೆದ್ದ ಸಾಧನೆ ಮಾಡಿತು. ನೆರೆಯ ಪಾಕಿಸ್ತಾನ 1 ಕಂಚಿನ ಪದಕದೊಂದಿಗೆ 79ನೇ ಸ್ಥಾನ ಗಳಿಸಿತು.