Sunday, November 24, 2024
Google search engine
Homeತಾಜಾ ಸುದ್ದಿಪಿಎಂ ಇ-ಡ್ರೈವ್ ಎಲೆಕ್ಟ್ರಿಕ್ ವಾಹನ ಯೋಜನೆಗೆ 10,900 ಕೋಟಿ ರೂ.: ಕೇಂದ್ರ ಸಂಪುಟ ಅಸ್ತು

ಪಿಎಂ ಇ-ಡ್ರೈವ್ ಎಲೆಕ್ಟ್ರಿಕ್ ವಾಹನ ಯೋಜನೆಗೆ 10,900 ಕೋಟಿ ರೂ.: ಕೇಂದ್ರ ಸಂಪುಟ ಅಸ್ತು

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ 10,900 ಕೋಟಿ ರೂ.ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇ-ಡ್ರೈವ್ ಯೋಜನೆಗೆ 10,900 ಕೋಟಿ ರೂ. ವಿನಿಯೋಗಿಸಲು ತೀರ್ಮಾನಿಸಲಾಯಿತು.

ಸಭೆಯ ನಂತರ ಸಚಿವ ಅಶ್ವಿನಿ ವೈಭವ್ ಈ ವಿಷಯ ತಿಳಿಸಿದ್ದು, 24.79 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು 3.16 ಲಕ್ಷ ತ್ರಿಚಕ್ರ ವಾಹನ ಮತ್ತು 14,028 ಇ-ಬಸ್ ಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ 88,500 ಇ-ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುವುದು. ಇ-ವಾಹನ ಖರೀದಿಸುವವರಿಗೆ ಸಬ್ಸಿಡಿ ರೂಪದಲ್ಲಿ 3,679 ಕೋಟಿ ರೂ. ನೀಡಲಾಗುವುದು, 14,028 ಇ-ಬಸ್ ಗಳ ಖರೀದಿಗಾಗಿ 4391 ಕೋಟಿ ರೂ. ವಿನಿಯೋಗವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಇ-ಆಂಬುಲೆನ್ಸ್ ಸೇವೆಗಾಗಿ 500 ಕೋಟಿ ರೂ. ನಿಗದಿಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಇ-ಆಂಬುಲೆನ್ಸ್ ಸೇವೆ ಜಾರಿಗೆ ತರಲಿದ್ದು, ಇದರಿಂದ ರೋಗಿಗಳಿಗೆ ಉತ್ತಮ ಸೇವೆ ದೊರೆಯಲಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments