ಗೌತಮ್ ಅದಾನಿ ಕಂಪನಿಯ ಅವ್ಯವಹಾರಗಳ ಕುರಿತು ತನಿಖಾ ವರದಿ ಬಿಡುಗಡೆ ಮಾಡುತ್ತಿರುವ ಹಿಂಡೇನ್ ಬರ್ಗ್ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದೆ.
ಅದಾನಿ ಗ್ರೂಪ್ ಅಕ್ರಮವಾಗಿ ನಡೆಸಿದ ಹಣದ ವ್ಯವಹಾರಗಳನ್ನು ಮುಚ್ಚಿಡಲು ಸ್ವಿಸ್ ಬ್ಯಾಂಕ್ ನ 6 ಖಾತೆಗಳಲ್ಲಿ ಇರಿಸಲಾಗಿದ್ದ 310 ದಶಲಕ್ಷ ಡಾಲರ್ ಮೊತ್ತವನ್ನು ಸೀಜ್ ಮಾಡಲಾಗಿದೆ ಎಂದು ಹಿಂಡೇನ್ ಬರ್ಗ್ ಹೇಳಿದೆ.
ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕ ಮೂಲದ ತನಿಖಾ ವರದಿ ಸಂಸ್ಥೆ ಹಿಂಡೇನ್ ಬರ್ಗ್ ವರದಿ ಮಾಡಿದ್ದು, 2021ರ ದಾಖಲೆಗಳನ್ನು ಉಲ್ಲೇಖಿಸಿ ಭಾರತದ ಅದಾನಿ ಕಂಪನಿ ಅಕ್ರಮ ಹಣದ ವಹಿವಾಟು ನಡೆಸಿರುವುದಕ್ಕೆ ಸಾಕ್ಷಿ ಒದಗಿಸಿದೆ.
ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಆಫ್ ಕಂಪನಿ ಸ್ವಿಸ್ ಬ್ಯಾಂಕ್ 6 ಖಾತೆಗಳಲ್ಲಿ ಇರಿಸಲಾಗಿದ್ದ 310 ದಶಲಕ್ಷ ಡಾಲರ್ ಮೊತ್ತವನ್ನು ಸೀಜ್ ಮಾಡಲಾಗಿದ್ದು, ಸುದೀರ್ಘ ತನಿಖೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕೂಡ ಬಹಿರಂಗಪಡಿಸಲಾಗಿತ್ತು ಎಂದು ಹೇಳಿದೆ.
ಹಿಂಡೇನ್ ಬರ್ಗ್ ವರದಿಯನ್ನು ಅದಾನಿ ಕಂಪನಿ ನಿರಾಕರಿಸಿದ್ದು, ಇದು ಆಧಾರ ರಹಿತ ಹಾಗೂ ಸುಳ್ಳು ಆಗಿದೆ ಎಂದು ಹೇಳಿದೆ.