ಭಾರತದ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ತೀವ್ರ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಶನಿವಾರ ತಡರಾತ್ರಿ ನಡೆದ ಫೈನಲ್ ನಲ್ಲಿ ನೀರಜ್ ಚೋಪ್ರಾ 0.1ಮೀ. ಅಂತರದಲ್ಲಿ ಹಿಂದೆ ಬಿದ್ದು ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.
ಅಮೆರಿಕದ ಅಂಡರ್ಸನ್ 87.87ಮೀ. ಎಸೆದು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ನೀರಜ್ ಚೋಪ್ರಾ 87.86 ಮೀ. ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಿದರು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದ ನೀರಜ್ ಚೋಪ್ರಾ, ಈ ಬಾರಿ 90 ಮೀ. ದಾಟುವ ಗುರಿ ಸಾಧ್ಯವಾಗಲಿಲ್ಲ.
ನೀರಜ್ ಚೋಪ್ರಾ ಮೊದಲ ಯತ್ನದಲ್ಲಿ 86.82 ಮೀ. ಎಸೆದರೆ, ಎರಡನೇ ಪ್ರಯತ್ನದಲ್ಲಿ 83.49 ಮೀ. 3ನೇ ಯತ್ನದಲ್ಲಿ ಗರಿಷ್ಠ 87.86 ಮೀ. ನಾಲ್ಕನೇ ಪ್ರಯತ್ನದಲ್ಲಿ 82.04 ಮೀ. ಹಾಗೂ ಅಂತಿಮ ಯತ್ನದಲ್ಲಿ 83,30 ಮೀ.ದೂರ ದಾಖಲಿಸುವಲ್ಲಿ ಯಶಸ್ವಿಯಾದರು.