ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಕೊನೆಗೂ ಅಧಿಸೂಚನೆ ಹೊರ ಬಿದ್ದಿದೆ. ರಾಜ್ಯ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಮತದಾನಕ್ಕಾಗಿ ವೇಳಾಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಪ್ರಕಟಿಸಲಾದಂತ ಅಧಿಸೂಚನೆಯಂತೆ ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಸ್ಥಾನಕ್ಕೆ ದಿನಾಂಕ 28-10-2024ರಂದು ಮತದಾನ ನಡೆದು, ಅಂದೇ ಮತಏಣಿಕೆಯ ನಂತ್ರ ಫಲಿತಾಂಶ ಪ್ರಕಟವಾಗಲಿದೆ.
ಇನ್ನೂ ತಾಲ್ಲೂಕು ಶಾಖೆಗಳ ತಾಲ್ಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ತಾಲ್ಲೂಕು ಯೋಜನಾ ಶಾಖೆಗಳ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಸ್ಥಾನಗಳಿಗೆ ದಿನಾಂಕ 16-11-2024ರಂದು ಮತದಾನ ನಡೆಯಲಿದೆ. ಅಂದೇ ಮತಏಣಿಕೆಯ ನಂತ್ರ ಫಲಿತಾಂಶ ಘಓಷಣೆಯಾಗಲಿದೆ.
ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣಾ ವೇಳಾಪಟ್ಟಿ
ನಾಮಪತ್ರ ಸಲ್ಲಿಕೆ ದಿನಾಂಕ 09-10-2024ರಿಂದ ಆರಂಭಗೊಳ್ಳಲಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 18-10-2024
ನಾಮಪತ್ರ ಪರಿಶೀಲನೆ ದಿನಾಂಕ 19-10-2024ರಂದು ನಡೆಯಲಿದೆ.
ಅರ್ಹ ಅಭ್ಯರ್ಥಿಗಳ ಹೆಸರನ್ನು ದಿನಾಂಕ 19-10-2024ರಂದು ಪ್ರಕಟಿಸಲಾಗುತ್ತದೆ.
ಉಮೇದುವಾರಿಕೆ ಹಿಂಪಡೆಯಲು ದಿನಾಂಕ 21-10-2024 ಕೊನೆಯ ದಿನವಾಗಿದೆ.
ಅಂತಿಮ ಕಣದಲ್ಲಿನ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ 21-10-2024ರ ಸಂಜೆ 5.30ಕ್ಕೆ ಪ್ರಕಟ
ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಸ್ಥಾನಕ್ಕೆ ದಿನಾಂಕ 28-10-2024ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ದಿನಾಂಕ 28-10-2024ರಂದು ಸಂಜೆ ಮತದಾನ ಮುಕ್ತಾಯದ ನಂತ್ರ ಮತಏಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ.
ತಾಲ್ಲೂಕು ಶಾಖೆಗಳ ತಾಲ್ಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ತಾಲ್ಲೂಕು ಯೋಜನಾ ಶಾಖೆಗಳ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣಾ ವೇಳಾಪಟ್ಟಿ
31-10-2024ರಿಂದ ನಾಮಪತ್ರ ಸಲ್ಲಿಕೆ ಆರಂಭ. 07-11-2024ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 08-11-2024ರಂದು ನಾಮಪತ್ರಗಳ ಪರಿಶೀಲನೆ. 08-11-2024ರಂದು ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟ. 11-11-2024ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ
ದಿನಾಂಕ 16-11-2024ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ
ದಿನಾಂಕ 16-11-2024ರಂದು ಮತದಾನ ಮುಕ್ತಾಯದ ನಂತ್ರ ಮತಏಣಿಕೆ, ಫಲಿತಾಂಶ ಪ್ರಕಟ