ಪ್ಯಾಲೇಸ್ತಿನ್ ಧ್ವಜ ಹಿಡಿದು ಬೈಕ್ ನಲ್ಲಿ ರೈಡ್ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ 6 ಅಪ್ರಾಪ್ತ ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಪಟ್ಟಣದ ದಂತರಮಕ್ಕಿ ರಸ್ತೆಯಲ್ಲಿ ಯುವಕರು ಭಾನುವಾರ ಬೈಕ್ ನಲ್ಲಿ ಪ್ಯಾಲೇಸ್ತಿನ್ ಧ್ವಜ ಹಿಡಿದು ಪ್ರಯಾಣಿಸುತ್ತಿದ್ದರು.
17 ವರ್ಷದ ಬಾಲಕ ಪ್ಯಾಲೆಸ್ತಿನ್ ಧ್ವಜ ಹಿಡಿದು ಹಿಂದೆ ಕೂತಿದ್ದರೆ, ಉಳಿದ ನಾಲ್ವರು ಮತ್ತೊಂದು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದರು. ಯುವಕರು ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಕಾನೂನು ಪ್ರಕಾರ ಅಪ್ರಾಪ್ತ ಯುವಕರ ವಿರುದ್ಧ ಸಮಾಜದಲ್ಲಿ ಕೋಮು ಭಾವನೆ ಪ್ರಚೋದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬೈಕ್ ಗಳು ಹಾಗೂ ಧ್ವಜವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ 20ಕ್ಕೂ ಹೆಚ್ಚು ಯುವಕರು ಯಾವುದೇ ಅನುಮತಿ ಪಡೆಯದೇ ಬೈಕ್ ರ್ಯಾಲಿ ಮಾಡಿದ್ದು, ಪ್ಯಾಲೆಸ್ತೀನ್ ಧ್ವಜ ಹಿಡಿದಿದ್ದರು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಆರೋಪಿಸಿದ್ದರು.