ಲೆಬೆನಾನ್ ನಲ್ಲಿ ಹಲವು ಕಡೆ ಪೇಜರ್ ಬಾಂಬ್ ಸ್ಫೋಟ ದಾಳಿಯಲ್ಲಿ ಬಾಲಕಿ ಸೇರಿದಂತೆ 8 ಮಂದಿ ಮೃತಪಟ್ಟಿದ್ದು, 2750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕ ಮತ್ತು ಯುರೋಪ್ ಗಳಲ್ಲಿ ನಿಷೇಧಿಸಲಾಗಿರುವ ಹೆಜಾಬುಲ್ಲಾ ಸಂಘಟನೆ ನಡೆಸಿದ ಸಂಘಟಿತ ಪೇಜರ್ ದಾಳಿಯಲ್ಲಿ ಗಾಯಗೊಂಡವರ ಪೈಕಿ 200 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಲೆಬೆನಾನ್ ನ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ರ ಸುಮಾರಿಗೆ ಈ ದಾಳಿ ನಡೆದಿದ್ದು, ಲೆಬೆನಾನ್ ನಲ್ಲಿರುವ ಇರಾನ್ ಅಂಬಾಸಿಡರ್ ಮೊಜತಾಬಿ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ತಿಳಿಸಿದೆ.
ಲೆಬೆನಾನ್ ಸಚಿವ ಫಿಯರ್ಸ್ ಅಬೈಡ್ ಉಗ್ರರ ದಾಳಿಯನ್ನು ದೃಢಪಡಿಸಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 2750 ಮಂದಿ ಗಾಯಗೊಂಡಿರುವುದು ನಿಜ. ಗಾಯಗೊಂಡರವಲ್ಲಿ ಬಹುತೇಕ ಮಂದಿಗೆ ಮುಖ, ಹೊಟ್ಟೆ ಮತ್ತು ಕೈಗಳಿಗೆ ಗಾಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹೆಜಾಬುಲ್ಲಾ ಸಂಘಟನೆ ಲೆಬೆನಾನ್ ನಲ್ಲಿ ಸೇನಾ ನೆಲೆ ಹೊಂದಿದ್ದು, ಅಮೆರಿಕ ಮತ್ತು ಯುರೋಪ್ ಗಳಲ್ಲಿ ರಾಜಕೀಯ ಮತ್ತು ಸೇನಾ ನಿಷೇಧ ಹೇರಲಾಗಿದೆ. ಈ ನಿಷೇಧಿತ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿದೆ.
ಕಳೆದ ವರ್ಷ ಗಾಜಾ ಯುದ್ಧ ಆರಂಭವಾದ ನಂತರ ಲೆಬೆನಾನ್ ನಲ್ಲಿ ಟೆಲಿ ಕಮ್ಯುನಿಕೇಷನ್ ವ್ಯವಸ್ಥೆ ಹೊಂದಿರುವ ಹೆಜಾಬುಲ್ಲಾ ನಾಗರಿಕರು ಮೊಬೈಲ್ ಬಳಸಬಾರದು ಎಂದು ಸೂಚಿಸಿತ್ತು.