Saturday, November 9, 2024
Google search engine
HomeUncategorized27 ದೇಶಗಳಿಗೆ ಹಬ್ಬಿದ ಕೋವಿಡ್ ರೂಪಾಂತರಿ ಎಕ್ಸ್ ಇಸಿ ತಳಿ!

27 ದೇಶಗಳಿಗೆ ಹಬ್ಬಿದ ಕೋವಿಡ್ ರೂಪಾಂತರಿ ಎಕ್ಸ್ ಇಸಿ ತಳಿ!

ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ಮಹಾಮಾರಿ ಕೊರೊನಾ ವೈರಸ್ ನ ಹೊಸ ರೂಪಾಂತರಿ ಎಕ್ಸ್ ಇಸಿ ವೈರಸ್ ಕೆಲವೇ ದಿನಗಳಲ್ಲಿ 27 ದೇಶಗಳಿಗೆ ಹಬ್ಬಿದ್ದು, ಜಗತ್ತಿನಲ್ಲಿ ಆತಂಕ ಮೂಡಿಸಿದೆ.

ಕೊರೊನಾದಿಂದ ರೂಪಾಂತರಗೊಂಡ ಒಮಿಕ್ರಾನ್ ನಿಂದ ರೂಪಾಂತರಗೊಂಡ ಎಕ್ಸ್ ಇಸಿ ವೈರಸ್ ಜರ್ಮನಿಯಲ್ಲಿ ಮೊದಲ ಬಾರಿ ಜೂನ್ ನಲ್ಲಿ ಪತ್ತೆಯಾಗಿದ್ದು, ಇದೀಗ 27 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.

ಅಮೆರಿಕ, ಬ್ರಿಟನ್, ನಾರ್ವೆ, ಪೋಲೆಂಡ್, ಉಕ್ರೇನ್, ಪೋರ್ಚುಗಲ್ ಮತ್ತು ಚೀನಾ, ಡೆನ್ಮಾರ್ಕ್, ನೆದರ್ಲೆಂಡ್ಸ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎಕ್ಸ್ ಇವಿ ವೈರಸ್ ಕಾಣಿಸಿಕೊಂಡಿದೆ.

ಅತ್ಯಂತ ವೇಗವಾಗಿ ಮನುಷ್ಯರ ಅಂಗಾಂಗಳ ಮೇಲೆ ಪ್ರಭಾವ ಬೀರುತ್ತಿರುವ ಎಕ್ಸ್ ಇಸಿ ತಡೆಯಲು ಲಸಿಕೆ ಪಡೆಯಬೇಕು ಎಂದು ಸೂಚಿಸಲಾಗಿದೆ. ಸದ್ಯಕ್ಕೆ ಈಗ ಲಭ್ಯವಿರುವ ಲಸಿಕೆಯೇ ಪರಿಣಾಮಕಾರಿಯಾಗಿದೆ. ಇದರಿಂದ ಜೀವ ಹಾನಿ ತಡೆಯಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಗುಣಲಕ್ಷಣಗಳು

ಒಮಿಕ್ರಾನ್ ಮಾದರಿಯಲ್ಲಿ ಜ್ವರ, ಕಫ, ಗಂಟಲು ನೋವು, ತುರಿಕೆ, ಸುಸ್ತು ಹಾಗೂ ದೇಹದ ತೂಕ ಇಳಿಕೆ ಎಕ್ಸ್ ಇಸಿ ಸೋಂಕಿನ ಲಕ್ಷಣಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments