Friday, November 22, 2024
Google search engine
Homeಕ್ರೀಡೆಏಕದಿನ ಕ್ರಿಕೆಟ್ ನಲ್ಲಿ 106 ರನ್ ಗೆ ಆಲೌಟ್: ಚಾರಿತ್ರಿಕ ಜಯ ಸಾಧಿಸಿದ ಆಫ್ಘಾನಿಸ್ತಾನ

ಏಕದಿನ ಕ್ರಿಕೆಟ್ ನಲ್ಲಿ 106 ರನ್ ಗೆ ಆಲೌಟ್: ಚಾರಿತ್ರಿಕ ಜಯ ಸಾಧಿಸಿದ ಆಫ್ಘಾನಿಸ್ತಾನ

ದಕ್ಷಿಣ ಆಫ್ರಿಕಾ ತಂಡ 106 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಆಫ್ಘಾನಿಸ್ತಾನ ತಂಡ 6 ವಿಕೆಟ್ ಜಯ ಸಾಧಿಸಿ ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ಬರೆದಿದೆ.

ಶಾರ್ಜಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 33.3 ಓವರ್ ಗಳಲ್ಲಿ 106 ರನ್ ಗೆ ಆಲೌಟಾಯಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 4ನೇ ಅತ್ಯಂತ ಕಳಪೆ ಮೊತ್ತಕ್ಕೆ ಔಟಾದ ಕುಖ್ಯಾತಿಗೆ ಪಾತ್ರವಾಯಿತು.

ಸುಲಭ ಗುರಿ ಬೆಂಬತ್ತಿದ ಆಫ್ಘಾನಿಸ್ತಾನ ತಂಡ 26 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಆಫ್ಘಾನಿಸ್ತಾನಕ್ಕೆ ಚೊಚ್ಚಲ ಜಯವಾಗಿದೆ. ಅಲ್ಲದೇ ಬಲಿಷ್ಠ ತಂಡದ ವಿರುದ್ಧದ ಅತೀ ದೊಡ್ಡ ಜಯವಾಗಿದೆ.

ಆಫ್ಘಾನಿಸ್ತಾನ ಗೆಲುವಿನಲ್ಲಿ ಮಧ್ಯಮ ವೇಗಿ ಫಜಾಲಖ್ ಫಾರೂಖಿ 4 ವಿಕೆಟ್ ಪಡೆದು ಮಹತ್ವದ ಪಾತ್ರ ವಹಿಸಿದರು. ಅಲ್ಲದೇ ಫಾರೂಖಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಗಜನ್ ಫರ್ 3 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ದಕ್ಷಿಣ ಆಫ್ರಿಕಾ ಪರ ಮಧ್ಯಮ ಕ್ರಮಾಂಕದಲ್ಲಿ ವಿಯಾನ್ ಮುಲ್ಡರ್ 84 ಎಸೆತದಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 52 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ನೆಲೆಯೂರುವ ಮುನ್ನವೇ ಪೆವಿಲಿಯನ್ ಪರೇಡ್ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments