ತಿರುಮತಿ ತಿಮ್ಮಪ್ಪನ ಪ್ರಖ್ಯಾತ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಸೇರ್ಪಡೆ ಆಗಿದೆ ಎಂಬ ವಿವಾದದ ಕುರಿತು ವರದಿ ಕೇಳಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ತಿಳಿಸಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಸೇರ್ಪಡೆ ಆಗಿದೆ ಎಂಬ ಲ್ಯಾಬ್ ವರದಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಕೇಳಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಚಂದ್ರಬಾಬು ನಾಯ್ಡು ಜೊತೆ ವಿವಾದದ ಕುರಿತು ಮಾತನಾಡಿದ್ದೇನೆ. ಎಫ್ ಎಸ್ ಎಸ್ ಐ ವರದಿಗೆ ತಿರುಪತಿ ಲಡ್ಡು ಮಾದರಿ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರ ತಪ್ಪು ಕಂಡುಬಂದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.