ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ ಚೆನ್ನೈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 149 ರನ್ ಗೆ ಪತನಗೊಂಡಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಚಹಾ ವಿರಾಮದ ನಂತರದ ಕೆಲವೇ ಹೊತ್ತಿನಲ್ಲಿ ಬಾಂಗ್ಲಾದೇಶ ತಂಡ 47.1 ಓವರ್ ಗಳಲ್ಲಿ 149 ರನ್ ಗೆ ಆಲೌಟಾಯಿತು.
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 376 ರನ್ ಗಳಿಸಿದ್ದು 227 ರನ್ ಗಳ ಭಾರೀ ಮುನ್ನಡೆ ಪಡೆದಿದೆ. ಆದರೆ ಫಾಲೋಆನ್ ಹೇರದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಮೂಲಕ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಲಯ ಕಂಡುಕೊಳ್ಳಲು ಬಳಸಿಕೊಳ್ಳಲು ನಿರ್ಧರಿಸಿದೆ.
ಭಾರತದ ಪರ ಜಸ್ ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ರವೀಂದ್ರ ಜಡೇಜಾ, ಆಕ್ಷ್ ದೀಪ್ ಮತ್ತು ಮೊಹಮದ್ ಸಿರಾಜ್ ತಲಾ 2 ವಿಕೆಟ್ ಪಡೆದರೆ, ಶತಕ ಸಿಡಿಸಿದ ಸ್ಪಿನ್ನರ್ ಒಂದೂ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.
ಬಾಂಗ್ಲಾದೇಶ ಪರ ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ (32) ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರೆ, ಮೆಹದಿ ಹಸನ್ (27), ಲಿಟನ್ ದಾಸ್ (22) ಕೆಳ ಕ್ರಮಾಂಕದಲ್ಲಿ ಹೋರಾಟ ನಡೆಸಿದ ತಂಡದ ಮೊತ್ತವನ್ನು 150ರ ಗಡಿ ಸಮೀಪ ಕೊಂಡೊಯ್ಯುವಲ್ಲಿ ಸಫಲರಾದರು.