ಸುಪ್ರೀಂಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಅಮೆರಿಕದ ರಿಪ್ಪೆಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಸ್ಪೊ ಕರೆನ್ಸಿ ಜಾಹಿರಾತು ಪ್ರದರ್ಶಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಪ್ರಕರಣಗಳ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವ ಉದ್ದೇಶದಿಂದ ಆರಂಭಿಸಲಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ದುಷ್ಕರ್ಮಿಗಳು ಶುಕ್ರವಾರ ಹ್ಯಾಕ್ ಮಾಡಿದ್ದಾರೆ.
ಬ್ರಾಡ್ ಗಾರ್ಲಿಂಗ್ ಹೌಸ್ ರಿಪ್ಲೆ ರೆಸ್ಪಾಂಡ್ಸ್ ಟು ದಿ ಸೆಕ್ಷನ್ 2 ಬಿಲಿಯನ್ ಡಾಲರ್ ಫೈನ್! ಎಕ್ಸ್ ಪಿಆರ್ ಪ್ರೈಸ್ ಪ್ರಿಡಿಕ್ಷನ್ ಎಂದು ಪೋಸ್ಟ್ ಮಾಡಲಾಗಿದೆ. 2018ರಿಂದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗಿದೆ.