Friday, September 20, 2024
Google search engine
Homeಕಾನೂನುಲೋಕ ಅದಾಲತ್: ಒಂದೇ ದಿನದಲ್ಲಿ 35.84 ಲಕ್ಷ ದಾಖಲೆ ಪ್ರಕರಣ ಇತ್ಯರ್ಥ

ಲೋಕ ಅದಾಲತ್: ಒಂದೇ ದಿನದಲ್ಲಿ 35.84 ಲಕ್ಷ ದಾಖಲೆ ಪ್ರಕರಣ ಇತ್ಯರ್ಥ

ರಾಜ್ಯಾದ್ಯಂತ ಸೆಪ್ಟೆಂಬರ್ 14ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ಒಂದೇ ದಿನದಲ್ಲಿ ದಾಖಲೆಯ 35.84 ಲಕ್ಷ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನ್ಯಾಯಮೂರ್ತಿವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಹಾಗೂ 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

2,402 ಕೋಟಿ ಪರಿಹಾರ ಮೊತ್ತದೊಂದಿಗೆ ಕೇಸ್​ ಇತ್ಯರ್ಥಗೊಳಿಸಲಾಗಿದೆ. ಅದಾಲತ್​ನಲ್ಲಿ 1,669 ವೈವಾಹಿಕ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಸಂಧಾನದ ಮೂಲಕ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ 248 ದಂಪತಿ ಒಟ್ಟುಗೂಡಿಸಲಾಗಿದೆ.

2,696 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. 3,621 ಅಪಘಾತ ಪ್ರಕರಣ​​ಗಳಲ್ಲಿ 191 ಕೋಟಿ ಪರಿಹಾರ ನೀಡಲಾಗಿದೆ. 8,517 ಚೆಕ್ ಬೌನ್ಸ್ ಪ್ರಕರಣಗಳನ್ನು ಬಗೆಹರಿಸಲಾಗಿದೆ. 2,598 ಅಮಲ್ದಾರಿ ಕೇಸ್, 73 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥಗೊಳಿಸಲಾಗಿದ್ದು, 5 ವರ್ಷಕ್ಕೂ ಹಳೆಯ 1,443 ಕೇಸ್ ಇತ್ಯರ್ಥಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments