ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆ ಆಗಿರುವ ನಳಿನಿ ಪತಿ ಸೇರಿದಂತೆ ಮೂವರು ಇಂದು ಭಾರತವನ್ನು ತೊರೆದು ತವರು ದೇಶವಾದ ಶ್ರೀಲಂಕಾಗೆ ಮರಳಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆ ಆಗಿದ್ದ ಮೂವರಿಗೂ ಸನ್ನಡತೆ ತೋರುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ನವೆಂಬರ್ 2022ರಲ್ಲಿ ಬಿಡುಗಡೆ ಆಗಿದ್ದ ಮುರುಗನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ತಿರುಚಿರಪಳ್ಳಿಯಲ್ಲಿ ನೆಲೆಸಿದ್ದರು. ಇದೀಗ ಭದ್ರತಾ ಸಿಬ್ಬಂದಿಯ ರಕ್ಷಣೆಯೊಂದಿಗೆ ಶ್ರೀಲಂಕಾಗೆ ಕಳುಹಿಸಿಕೊಡಲಾಗಿದೆ.
ಶ್ರೀಲಂಕಾ ಸರ್ಕಾರ ಮೂವರಿಗೂ ಇತ್ತೀಚೆಗೆ ಪಾಸ್ ಪೋರ್ಟ್ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಸೂಕ್ತ ಭದ್ರತೆಯೊಂದಿಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದ್ದು, ವಿಮಾನ ಮೂಲಕ ಕೊಲೊಂಬೊಗೆ ಕಳುಹಿಸಿಕೊಡಲಾಯಿತು.