ಮೆಗಾಸ್ಟಾರ್ ನಟ ಚಿರಂಜೀವಿ ಭಾರತೀಯ ಚಿತ್ರರಂಗದ ಅತ್ಯಂತ ನಟ ಹಾಗೂ ಡ್ಯಾನ್ಸರ್ ಆಗಿ ವಿಶ್ವದಾಖಲೆ ಬರೆದಿದ್ದಾರೆ.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಗಿನ್ನಿಲ್ ದಾಖಲೆ ಪ್ರಮಾಣಪತ್ರವನ್ನು ಚಿರಂಜೀವಿಗೆ ಅವರಿಗೆ ನೀಡಿ ಸನ್ಮಾನಿಸಿದರು.
ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಸಮೃದ್ಧ ಚಲನಚಿತ್ರ ತಾರೆ-ನಟ/ನರ್ತಕಿ ಕೊನಿಡೆಲಾ ಚಿರಂಜೀವಿ ಅಕಾ ಮೆಗಾ ಸ್ಟಾರ್ ಎಂದು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಚಿರಂಜೀವಿ, ಈ ಕ್ಷಣ ಅವಿಸ್ಮರಣೀಯವಾಗಿದೆ. ನಾನು ಎಂದಿಗೂ ಗಿನ್ನಿಸ್ ವಿಶ್ವ ದಾಖಲೆ ಮಾಡುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ ನನ್ನ ಡ್ಯಾನ್ಸ್ ಮತ್ತು ನಟನೆಗಾಗಿ ಈ ಗೌರವ ಬಂದಿದೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಈಗ ನಾನು ನಿಜವಾಗಿಯೂ ಸ್ಟಾರ್ ನಟ ಎಂದು ಅನಿಸುತ್ತಿದೆ ಎಂದು ಹೇಳಿದರು.
ಡ್ಯಾನ್ಸ್ ಅನ್ನುವುದು ನನ್ನ ಸಿನಿಮಾದಲ್ಲಿ ಒಂದು ಭಾಗ. ಹಾಗೂ ನನ್ನ ನಟನೆಯ ಒಂದು ಭಾಗ ಕೂಡ ಆಗಿತ್ತು. ನನಗೆ ಮೊದಲ ಡ್ಯಾನ್ಸ್ ಗೆ ಕೊರಿಯೊಗ್ರಾಫ್ ಮಾಡಿದ ಸಾವಿತ್ರಿ ಅವರು ಹೇಳಿಕೊಟ್ಟಿದ್ದು ಈಗಲೂ ನನಗೆ ನೆನಪಿದೆ. ಈ ಗೌರವ ಸಲ್ಲಲು ನಿರ್ದೇಶಕರು, ನಿರ್ಮಾಪಕರು ಹಾಗೂ ಕೊರಿಯೊಗ್ರಾಫರ್ ಗಳು ಕಾರಣ ಎಂದು ಅವರು ಹೇಳಿದರು.
ಮೆಗಾ ಸ್ಟಾರ್ ಚಿರಂಜೀವಿ 45 ವರ್ಷಗಳ ಅವಧಿಯಲ್ಲಿ 156 ಚಿತ್ರಗಳಲ್ಲಿ ಅಭಿನಯಿಸಿದ್ದು, 537 ಗೀತೆಗಳಿಗೆ 24,000 ಡ್ಯಾನ್ಸ್ ಮೂವ್ ಮೆಂಟ್ ಮಾಡಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ವಿಶೇಷ ಅಂದರೆ 1978, ಸೆಪ್ಟೆಂಬರ್ 22ರಂದು ಚಿರಂಜೀವಿ ಚಲನಚಿತ್ರಕ್ಕೆ ಪಾದರ್ಪಣೆ ಮಾಡಿದ್ದು, ಅದೇ ದಿನವೇ ಗಿನ್ನಿಸ್ ದಾಖಲೆಗೆ ಪಾತ್ರರಾಗಿರುವುದು.
ಎಲ್ಲಾ 156 ಚಲನಚಿತ್ರಗಳು ಮತ್ತು ಅವರ ನೃತ್ಯ ಪ್ರದರ್ಶನಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ, ಈ ಸಾಧನೆಯು ಅಧಿಕೃತವಾಗಿ ಅದ್ಭುತವಾಗಿದೆ ಎಂದು ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಿದ್ದೇವೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ರಿಚರ್ಡ್ ಸ್ಟೆನ್ನಿಂಗ್ ವಿವರಿಸಿದರು.
ಚಿರಂಜೀವಿ ನನ್ನ ಸೋದರರಂತೆ. ಅವರಿಗೆ ನಾನು ಈ ಗೌರವ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅವರ ಡ್ಯಾನ್ಸ್ ನೋಡಿದರೆ ಮನಸ್ಫೂರ್ತಿಯಾಗಿ ಡ್ಯಾನ್ಸ್ ಮಾಡುವುದನ್ನು ಗಮನಿಸಬಹುದು. ಅವರ ಬದ್ಧತೆ ಈ ಸಾಧನೆಗೆ ಕಾರಣ ಎಂದು ಭಾವಿಸುತ್ತೇನೆ ಎಂದು ನಟ ಅಮಿರ್ ಖಾನ್ ಹೇಳಿದರು.
ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಕೇಂದ್ರ ಕಲ್ಲಿದ್ದಲು ಸಚಿವ ಜಿ ಕಿಶನ್ ರೆಡ್ಡಿ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಸೇರಿದಂತೆ ಹಲವರು ಚಿರಂಜೀವಿ ಅವರನ್ನು ಅಭಿನಂದಿಸಿದರು.