Monday, September 23, 2024
Google search engine
Homeತಾಜಾ ಸುದ್ದಿಬಿಡಿಎ ವಶಪಡಿಸಿಕೊಂಡ ಜಮೀನು ಡಿನೋಟಿಫೈ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಆದೇಶ

ಬಿಡಿಎ ವಶಪಡಿಸಿಕೊಂಡ ಜಮೀನು ಡಿನೋಟಿಫೈ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಆದೇಶ

ಬಿಡಿಎ ಸ್ವಾಧೀನಪಡಿಸಿಕೊಂಡ ಯಾವ ಜಮೀನನ್ನೂ ಡಿನೋಟಿಫೈ ಮಾಡದಂತೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಮುಡಾ ಹಗರಣದಿಂದ ಎಚ್ಚೆತ್ತ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಡಿನೋಟಿಫಿಕೇಷನ್ ಮಾಡದಂತೆ ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ.

ತನ್ನ ಗಮನಕ್ಕೆ ಬಾರದಂತೆ ಡಿನೊಟೀಫೈ ಮಾಡಬಾರದು. ಡಿನೋಟಿಫೈ ಮಾಡುವುದಿದ್ದಲ್ಲಿ ಜತೆ ಪತ್ರ ವ್ಯವಹಾರ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಬದಲಿ ನಿವೇಶನಗಳ ಹಂಚಿಕೆ ಹಾಗೂ ಹರಾಜು ಹಂಚಿಕೆ ಮಾಡುವಾಗಲೂ ಕೂಡ ನನ್ನ ಗಮನಕ್ಕೆ ಬರಬೇಕು. ಕಾನೂನು ಮೀರಿ ಯಾವುದೇ ಭೂ ವ್ಯವಹಾರಗಳ ಕೆಲಸ ಮಾಡದಂತೆ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ನನ್ನ ಗಮನಕ್ಕೆ ಬಾರದೇ ಸೈಟ್ ಹಂಚಿಕೆ, ಮರು ಹಂಚಿಕೆ ಅಥವಾ ಡಿನೋಟಿಫೈನಂತಹ ಯಾವುದೇ ಅಕ್ರಮಗಳು ನಡೆದಿದ್ದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಗಸ್ಟ್ 28ರಂದು ಹೊರಡಿಸಿರುವ ಆದೇಶದಲ್ಲಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments