ಆಪಲ್ ಉತ್ಪನ್ನಗಳಾದ ಐಫೋನ್, ಐಪ್ಯಾಡ್, ಮ್ಯಾಕ್ ಬುಕ್ ಮತ್ತು ವಿಶನ್ ಪ್ರೊ ಹೆಡ್ ಸೆಟ್ಸ್ಗಳು ಅತ್ಯಂತ ಅಪಾಯಕಾರಿಯಾಗಿವೆ ಎಂದು ಕೇಂದ್ರ ಸರ್ಕಾರದ ರಕ್ಷಣಾ ಸಲಹಾ ಸಂಸ್ಥೆ ಎಚ್ಚರಿಕೆ ನೀಡಿದೆ.
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಗ್ರಾಹಕರಿಗೆ ಈ ಎಚ್ಚರಿಕೆ ಸಂದೇಶ ರವಾನಿಸಿದ್ದು, ಆಪಲ್ ಉತ್ಪನ್ನಗಳಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಷನ್ ನಲ್ಲಿ ದೋಷವಿದೆ ಎಂದು ಹೇಳಿದೆ.
ಅಪಲ್ ಸಫಾರಿ ವಿಭಾಗಗಳಲ್ಲಿನ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಗಳಲ್ಲಿ ದೋಷ ಇದ್ದು, ಇದು ರಿಮೋಟ್ ಮೂಲಕ ದಾಳಿ ಮಾಡುವ ಹ್ಯಾಕರ್ಸ್ ಗೆ ಸುಲಭದ ತುತ್ತಾಗಲಿದೆ ಎಂದು ಕೇಂದ್ರ ಸರ್ಕಾರದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ವಿವರಿಸಿದೆ.