ದಾಖಲೆಯ 5 ಬಾರಿ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಿರುವ ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಕೈಬಿಡಲಾಗಿದೆ.
ಕಳೆದ ಆವೃತ್ತಿಯಲ್ಲಿ ಏಕಾಏಕಿ ತಂಡದ ನಾಯಕ ಸ್ಥಾನದಿಂದ ಕಿತ್ತು ಹಾಕಿದ್ದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಿತ್ತು.
ತಂಡದಲ್ಲಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ರೋಹಿತ್ ಶರ್ಮ ತಂಡವನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಅಧಿಕೃತವಾಗಿ ಬಿಟ್ಟುಕೊಟ್ಟಿದ್ದು, ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.
ರೋಹಿತ್ ಶರ್ಮ ಅವರನ್ನು ಖರೀದಿಸಲು ತಂಡಗಳಲ್ಲಿ ಈಗಾಗಲೇ ಪೈಪೋಟಿ ಏರ್ಪಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಳೆಯಲು ಪ್ರಯತ್ನ ನಡೆಸಿವೆ ಎಂದು ಹೇಳಲಾಗಿದೆ.
ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತಂಡದ ಪರ 257 ಪಂದ್ಯಗಳನ್ನು ಆಡಿದ್ದು, 29.72ರ ಸರಾಸರಿಯಲ್ಲಿ 6,628 ರನ್ ಗಳಿಸಿದ್ದಾರೆ. 2 ಶತಕ ಹಾಗೂ 43 ಅರ್ಧಶತಕ ಗಳಿಸಿದ್ದಾರೆ. ಅಲ್ಲದೇ 5 ಬಾರಿ ಗೆಲ್ಲಿಸಿಕೊಡುವ ಮೂಲಕ ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವಕ್ಕೆ ರೋಹಿತ್ ಪಾತ್ರರಾಗಿದ್ದಾರೆ.