Sunday, November 24, 2024
Google search engine
Homeತಾಜಾ ಸುದ್ದಿSHOCKING ಪ್ಯಾರಸಿಟಮೊಲ್ ಸೇರಿ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ!

SHOCKING ಪ್ಯಾರಸಿಟಮೊಲ್ ಸೇರಿ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ!

ಪ್ಯಾರಸಿಟಮೊಲ್, ಕ್ಯಾಲ್ಶಿಯಂ, ವಿಟಮಿನ್ ಡಿ3, ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆಗಳ ನಿಯಂತ್ರಣ ಸೇರಿದಂತೆ 53 ಪ್ರಮುಖ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ದೇಶದ ಪ್ರಮುಖ 50ಕ್ಕೂ ಹೆಚ್ಚು ಔಷಧಗಳು ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಎಚ್ಚರಿಸಿದೆ. ಆಯಾ ರಾಜ್ಯಗಳಲ್ಲಿ ಅಧಿಕಾರಿಗಳು ಪ್ರತಿ ತಿಂಗಳು ನಡೆಸುವ ಸರಾಸರಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ತಿಳಿಸಿದೆ.

ವಿಟಮಿನ್ ಸಿ, ಡಿ 3 ಮಾತ್ರೆಗಳು ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಸಾಫ್ಟ್ ಜೆಲ್‌ಗಳು, ಆಂಟಿ ಆಸಿಡ್ ಪ್ಯಾನ್-ಡಿ, ಪ್ಯಾರೆಸಿಟಮಾಲ್ ಐಪಿ 500 ಮಿ.ಗ್ರಾಂ, ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್ ಸೇರಿದಂತೆ 53 ಔಷಧಿಗಳಲ್ಲಿ ಕಳಪೆ ಗುಣಮಟ್ಟದಾಗಿದ್ದು, ಔಷಧ ನಿಯಂತ್ರಕರಿಂದ ಗುಣಮಟ್ಟದ ತಪಾಸಣೆ ವಿಫಲವಾಗಿದೆ.

ಈ ಔಷಧಿಗಳನ್ನು ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲಾಗುತ್ತಿದೆ.

ಹೊಟ್ಟೆಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುವ ಔಷಧವಾದ ಮೆಟ್ರೋನಿಡಜೋಲ್ ಅನ್ನು ಪಿಎಸ್‌ಯು ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸುತ್ತದೆ, ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ.

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರೆಸಿಟಮಾಲ್ ಮಾತ್ರೆಗಳನ್ನು ಗುಣಮಟ್ಟ ಕಾಯ್ದುಕೊಂಡಿಲ್ಲ. ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ವಿತರಿಸಿದ ಮತ್ತು ಉತ್ತರಾಖಂಡ ಮೂಲದ ಪ್ಯೂರ್ & ಕ್ಯೂರ್ ಹೆಲ್ತ್ ಕೇರ್ ತಯಾರಿಸಿದ ಶೆಲ್ಕಾಲ್ ಔಷಧ ಕೂಡ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದೆ.

ಕೋಲ್ಕತ್ತಾದ ಡ್ರಗ್-ಟೆಸ್ಟಿಂಗ್ ಲ್ಯಾಬ್ ಅಲ್ಕೆಮ್ ಹೆಲ್ತ್ ಸೈನ್ಸ್‌ನ ಪ್ರತಿಜೀವಕಗಳಾದ ಕ್ಲಾವಮ್ 625 ಮತ್ತು ಪ್ಯಾನ್ ಡಿಗಳನ್ನು ನಕಲಿ ಎಂದು ಪರಿಗಣಿಸಿದೆ. ಹೈದರಾಬಾದ್ ಮೂಲದ ಹೆಟೆರೊದ ಸೆಪೊಡೆಮ್ ಎಕ್ಸ್‌ಪಿ 50 ಡ್ರೈ ಸಸ್ಪೆನ್ಷನ್ ಅನ್ನು ಗುರುತಿಸಿದೆ. ಇದು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನ ಮಕ್ಕಳಿಗೆ ಶಿಫಾರಸು ಮಾಡಲ್ಪಟ್ಟಿದೆ.

ಔಷಧ ನಿಯಂತ್ರಕರು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಔಷಧಗಳ ಎರಡು ಪಟ್ಟಿಗಳನ್ನು ಹಂಚಿಕೊಂಡಿದ್ದಾರೆ. ಒಂದು 48 ಜನಪ್ರಿಯ ಔಷಧಗಳನ್ನು ಹೊಂದಿದ್ದರೆ, ಎರಡನೆಯ ಪಟ್ಟಿಯು ಈ ಪರೀಕ್ಷೆಗಳಲ್ಲಿ ವಿಫಲವಾದ ಔಷಧೀಯ ಕಂಪನಿಗಳ ವಿವರಗಳನ್ನು ನೀಡಲಾಗಿದೆ. ಕಂಪನಿಗಳು ತಪ್ಪು ಒಪ್ಪಿಕೊಳ್ಳುವ ಬದಲು ನಷ್ಟ ಎಂದು ತೋರಿಸುತ್ತಿವೆ ಎಂದು ಸಂಸ್ಥೆ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments