ಜಿತಿಯಾ ಅಥವಾ ಜೀವಿತಾ ಪುತ್ರಿಕಾ ಹಬ್ಬದ ವೇಳೆ ಪವಿತ್ರಾ ಸ್ನಾನಕ್ಕೆ ನದಿಗೆ ಇಳಿದಿದ್ದ 37 ಮಕ್ಕಳು ಸೇರಿದಂತೆ 46 ಮಂದಿ ಮೃತಟ್ಟ ದಾರುಣ ಘಟನೆ ಬಿಹಾರದಲ್ಲಿ ಸಂಭವಿಸಿದೆ.
ಬಿಹಾರದ ವಿವಿದೆಡೆಯ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
`ಜಿತಿಯಾ’ ಹಬ್ಬವನ್ನು ತಾಯಂದಿರು ತಮ್ಮ ಮಕ್ಕಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಆಚರಿಸುತ್ತಾರೆ. ಮಕ್ಕಳು, ತಮ್ಮ ತಾಯಂದಿರೊಂದಿಗೆ ವಿವಿಧ ಜಲಮೂಲಗಳಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡಗಳು ಸಂಭವಿಸಿವೆ.
ಪೂರ್ವ ಮತ್ತು ಪಶ್ಚಿಮ ಚಂಪಾರಣ್, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‍ಪುರ, ಸಮಸ್ತಿಪುರ್, ಗೋಪಾಲ್‍ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಜನ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆಗಳು ವರದಿಯಾಗಿವೆ.
`ಜಿತಿಯಾ’ ಹಬ್ಬವನ್ನು ತಾಯಂದಿರು ತಮ್ಮ ಮಕ್ಕಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಆಚರಿಸುತ್ತಾರೆ. ಮಕ್ಕಳು, ತಮ್ಮ ತಾಯಂದಿರೊಂದಿಗೆ ವಿವಿಧ ಜಲಮೂಲಗಳಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡಗಳು ಸಂಭವಿಸಿವೆ.