Sunday, November 24, 2024
Google search engine
Homeತಾಜಾ ಸುದ್ದಿಸಮುದ್ರದಲ್ಲಿ ಮುಳುಗಿದ ಪರಮಾಣು ಸಾಮರ್ಥ್ಯದ ಚೀನಾದ ಜಲಂತರ್ಗಾಮಿ!

ಸಮುದ್ರದಲ್ಲಿ ಮುಳುಗಿದ ಪರಮಾಣು ಸಾಮರ್ಥ್ಯದ ಚೀನಾದ ಜಲಂತರ್ಗಾಮಿ!

ಚೀನಾದ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಸಮುದ್ರದಲ್ಲಿ ಮುಳುಗಡೆ ಆಗಿದೆ ಎಂದು ಅಮೆರಿಕ ಹೇಳಿದೆ.

ಇತ್ತೀಚೆಗೆ ಭಾರತ ಸೇರಿದಂತೆ ನೆರೆಯ ರಾಜ್ಯಗಳ ಮೇಲೆ ಸೇನಾ ಸಾಮರ್ಥ್ಯ ಬಲ ಪ್ರದರ್ಶನಕ್ಕೆ ಮುಂದಾಗಿರುವ ಚೀನಾದ ಪರಮಾಣು ದಾಳಿ ನಡೆಸುವ ಸಾಮರ್ಥ್ಯದ ಜಲಂತರ್ಗಾಮಿ ಹಡಗು ಮುಳುಗಡೆ ಆಗಿದೆ. ಆದರೆ ಮುಳುಗಡೆಯ ವಿವರ ಬಹಿರಂಗಗೊಂಡಿಲ್ಲ.

ವಿಶ್ವದ ಅತಿದೊಡ್ಡ ನೌಕಾಪಡೆ ಹೊಂದಿರುವ ಚೀನಾ ಬಳಿ ಈಗಾಗಲೇ 370ಕ್ಕೂ ಹೆಚ್ಚು ಜಲಂತಾರ್ಗಾಮಿ ಹಡಗು ಇದೆ.  ಇತ್ತೀಚೆಗೆ ಹೊಸ ಪೀಳಿಗೆಯ ಪರಮಾಣು-ಸಜ್ಜಿತ ಜಲಾಂತರ್ಗಾಮಿ ನೌಕೆಗಳ ಉತ್ಪಾದನೆಯ ಕೂಡಾ ಪ್ರಾರಂಭಿಸಿದೆ.

ಚೀನಾದ ಹೊಸ ಪ್ರಥಮ ದರ್ಜೆಯ ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ಮೇ ಮತ್ತು ಜೂನ್ ನಡುವೆ ಸಮುದ್ರದಲ್ಲಿ ಮುಳುಗಡೆ ಆಗಿದೆ. ಇದು ಚೀನಾಗೆ ಅತ್ಯಂತ ಮುಜುಗರದ ವಿಷಯವಾಗಿದ್ದು, ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಗೆ ಬರದಂತೆ ನೋಡಿಕೊಳ್ಳುತ್ತಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಡಗು ಮುಳುಗಿರುವ ವಿಷಯ ನಿಜವಾಗಿದೆ. ಆದರೆ ಹಡಗು ಮುಳುಗಡೆಗೆ ಕಾರಣ ತಿಳಿದು ಬಂದಿಲ್ಲ. ಅದರಲ್ಲಿ ಪರಮಾಣು ಅಥವಾ ಇನ್ನಾವುದೇ ಅಸ್ತ್ರ ಇತ್ತೆ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ವಾಷಿಂಗ್ಟನ್‌ ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

2022ರಲ್ಲಿ ಚೀನಾ 6 ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳು, 6 ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳು ಮತ್ತು 48 ಡೀಸೆಲ್-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ ಎಂದು ಚೀನಾದ ಮಿಲಿಟರಿಯ ಪೆಂಟಗನ್ ವರದಿಯ ಪ್ರಕಾರ. ಆ ಜಲಾಂತರ್ಗಾಮಿ ಬಲವು 2025ರ ವೇಳೆಗೆ 65 ಮತ್ತು 2035 ರ ವೇಳೆಗೆ 80 ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದು ಯುಎಸ್ ರಕ್ಷಣಾ ಇಲಾಖೆ ಹೇಳಿದೆ.

ಬುಧವಾರ, ಚೀನಾವು ಪೆಸಿಫಿಕ್ ಮಹಾಸಾಗರಕ್ಕೆ ಖಂಡಾಂತರ ಕ್ಷಿಪಣಿಯ ಅಪರೂಪದ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದೆ, ಇದು ದೇಶದ ಪರಮಾಣು ನಿರ್ಮಾಣದ ಬಗ್ಗೆ ಅಂತರರಾಷ್ಟ್ರೀಯ ಕಳವಳವನ್ನು ಹೆಚ್ಚಿಸುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments