Sunday, November 24, 2024
Google search engine
Homeಕ್ರೀಡೆಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.: ಐಪಿಎಲ್ ಆಟಗಾರರಿಗೆ ಬಿಸಿಸಿಐನಿಂದ ಬಂಪರ್ ಘೋಷಣೆ!

ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.: ಐಪಿಎಲ್ ಆಟಗಾರರಿಗೆ ಬಿಸಿಸಿಐನಿಂದ ಬಂಪರ್ ಘೋಷಣೆ!

ಐಪಿಎಲ್ ನಲ್ಲಿ ಆಡುವ ಪ್ರತಿ ಪಂದ್ಯಕ್ಕೆ ಆಟಗಾರರಿಗೆ 7.5 ಲಕ್ಷ ರೂ. ಶುಲ್ಕ ನೀಡುವುದಾಗಿ ಬಿಸಿಸಿಐ ಘೋಷಣೆ ಮಾಡಿದೆ. ಈ ಮೂಲಕ ಭಾರತೀಯ ಆಟಗಾರರಿಗೆ ಬಂಪರ್ ಘೋಷಣೆ ಮಾಡಿದೆ.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಶನಿವಾರ ಎಕ್ಸ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿ ಐತಿಹಾಸಿಕ ನಿರ್ಧಾರವನ್ನು ಘೋಷಿಸಿದ್ದಾರೆ.

ಐಪಿಎಲ್ ನಲ್ಲಿ ಆಟಗಾರರನ್ನು ಹೆಚ್ಚು ಉತ್ತಮ ಪ್ರದರ್ಶನ ನೀಡುವುದನ್ನು ಉತ್ತೇಜಿಸುವ ಉದ್ದೇಶದಿಂದ ಬಿಸಿಸಿಐ ಆಟಗಾರರಿಗೆ ಪಂದ್ಯ ಶುಲ್ಕದ ಘೋಷಣೆ ಮಾಡಿದೆ.

ಐಪಿಎಲ್ ಆಟಗಾರರಿಗೆ ಪಂದ್ಯ ಶುಲ್ಕ ನೀಡಲು ಫ್ರಾಂಚೈಸಿಗಳಿಗೆ 12.50 ಕೋಟಿ ರೂ. ಮೀಸಲಿಡಲು ಸೂಚಿಸಿದೆ. ಇದರಿಂದ ಒಬ್ಬ ಆಟಗಾರ ಒಂದು ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಆಡಿದರೆ ಆತನಿಗೆ 1.05 ಕೋಟಿ ರೂ. ಶುಲ್ಕ ದೊರೆಯಲಿದೆ.

ಸೆಪ್ಟೆಂಬರ್ 29ರಂದು ಭಾನುವಾರ ಬಿಸಿಸಿಐ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಈ ವೇಳೆ ಐಪಿಎಲ್ ನಲ್ಲಿ ಪ್ರಾಂಚೈಸಿಗಳು ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೇ ಹರಾಜಿನಲ್ಲಿ ಫ್ರಾಂಚೈಸಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಮೂಲಕ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಈ ಮೂಲಕ ಒಟ್ಟಾರೆ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.

ಇದೇ ವೇಳೆ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸೀಮಿತಗಳಿಸಲಾಗಿದ್ದ 90 ಕೋಟಿ ರೂ. ಮೊತ್ತವನ್ನು 110ರಿಂದ 120 ಕೋಟಿ ರೂ.ಗೆ ಹೆಚ್ಚಿಸುವ ಕುರಿತು ಭಾನುವಾರದ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಹೇಳಲಾಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments