Monday, September 30, 2024
Google search engine
Homeಜಿಲ್ಲಾ ಸುದ್ದಿUDUPI ACCIDENT ಬೈಕ್ ಗೆ ಲಾರಿ ಡಿಕ್ಕಿ: ಮೂವರು ಮಕ್ಕಳ ಜೊತೆ ತಂದೆ ಸಾವು, ಪತ್ನಿ...

UDUPI ACCIDENT ಬೈಕ್ ಗೆ ಲಾರಿ ಡಿಕ್ಕಿ: ಮೂವರು ಮಕ್ಕಳ ಜೊತೆ ತಂದೆ ಸಾವು, ಪತ್ನಿ ಗಂಭೀರ

ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೊಸ್ಮಾರುನ ಪಾಜೆಗುಡ್ಡೆ ಬಳಿ ಬೈಕ್​  ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಸುರೇಶ್ ಆಚಾರ್ಯ (36), ಸಮೀಕ್ಷಾ (7), ಸುಶ್ಮಿತಾ (5) ಮತ್ತು ಸುಶಾಂತ್ (2) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸುರೇಶ್ ಪತ್ನಿ ಮೀನಾಕ್ಷಿ ಆಚಾರ್ಯ (32) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರೇಶ್ ಆಚಾರ್ಯ ಕುಟುಂಬ ಕಾರ್ಕಳದಿಂದ ವೇಣೂರು ತೆರಳುತ್ತಿದ್ದಾಗ ಲಾರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಿನಿ ಲಾರಿಗೆ ಡಿಕ್ಕಿಯಾದ ಬೈಕ್‌ ನಜ್ಜುಗುಜ್ಜಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments