ಇಸ್ಲಾಂ ಧರ್ಮ ಹಾಗೂ ಧರ್ಮಗುರು ಮೊಹಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಹಾಂತ ರಾಮಗಿರಿ ಮಹರಾಜ್ ವಿರುದ್ಧ ಮಹಾರಾಷ್ಟ್ರದಲ್ಲಿ 67 ಎಫ್ ಐಆರ್ ದಾಖಲಾಗಿವೆ.
ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ರಾಜ್ಯದ ವಿವಿದೆಡೆ ಮಹಾಂತ ರಾಮಗಿರಿ ಮಹರಾಜ್ ವಿರುದ್ಧ 67 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.
ಇಸ್ಲಾಂ ಧರ್ಮ ಹಾಗೂ ಮೊಹಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೈರಲ್ ಆಗಿತ್ತು. ಪ್ರಚೋದನಕಾರಿ ಭಾಷಣದ ವೀಡಿಯೊವನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಸಾರವಾಗದಂತೆ ತಡೆ ಹಿಡಿದಿದ್ದಾರೆ.
ಪ್ರಕರಣ ದಾಖಲಾಗಿರುವ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡ ಮುಖ್ಯಮಂತ್ರಿ ಶಿಂಧೆ ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಮಹಾರಾಷ್ಟ್ರ ಅಡ್ವೋಕೇಟ್ ಜನರಲ್ ಮನವಿ ಮಾಡಿದರು.
ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗಲು ಸ್ವಾಮೀಜಿಗಳ ಹೇಳಿಕೆ ಕಾರಣ ಎಂದು ಆರೋಪಿಸಿ ಮೊಹಮದ್ ವಾಸಿ ಮುಂತಾದವರು 2014ರಲ್ಲಿ ದೂರು ನೀಡಿದ್ದರು. ಸ್ವಾಮೀಜಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಸಿಎಂ ವೇದಿಕೆ ಹಂಚಿಕೊಂಡಿರುವುದು ವಿಪರ್ಯಾಸ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಅವರ ಪರ ವಕೀಲ ಇಜಾಜ್ ನಕ್ವಿ ವಾದಿಸಿದರು.