ಉದ್ಯಮಿ ಗೌತಮ್ ಅದಾನಿ ಜೊತೆ ಅಕ್ರಮ ಹಣದ ವ್ಯವಹಾರ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಂಸದೀಯ ಸಾರ್ವಜನಿಕ ಖಾತೆಗಳ ಸಮಿತಿ ಸೆಬಿ ಮುಖ್ಯಸ್ಥೆ ಮದ್ಹಾರಾ ಪುರಿಗೆ ನೋಟೀಸ್ ಜಾರಿ ಮಾಡಿದೆ.
ಮುಖ್ಯಸ್ಥೆ ಮದ್ಹಾರಾ ಸೇರಿದಂತೆ ಸೆಬಿ ಸದಸ್ಯರಿಗೆ ನೋಟಿಸ್ ಜಾರಿ ಮಾಡಿರುವ ಸಾರ್ವಜನಿಕ ಖಾತೆಗಳ ಸಮಿತಿ ಅಕ್ಟೋಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಅಮೆರಿಕ ಮೂಲಕ ಹಿಂಡೆನ್ ಬರ್ಗ್ ಅಕ್ರಮಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ ಹಿನ್ನೆಲಯಲ್ಲಿ ವಿಚಾರಣೆಗೆ ಕರೆಯಲಾಗಿದ್ದು, ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯ ಹಾಗೂ ದಾಖಲೆಗಳನ್ನು ಜೊತೆಗೆ ತರಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಅದಾನಿ ಗ್ರೂಪ್ ಅಕ್ರಮಗಳ ಹಿಂದೆ ಸೆಬಿ ಕೈವಾಡವಿದೆ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ನೀಡಿ ಬದಲಿಯಾಗಿ ಸಿಂಗಾಪುರದಲ್ಲಿ ಷೇರುಗಳನ್ನು ಪಡೆದಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂ ಅಕ್ರಿಮ ಸಂಪತ್ತು ಗಳಿಸಿದ್ದಾರೆ ಎಂದು ಹಿಂಡೆನ್ ಬರ್ಗ್ ವರದಿ ಆರೋಪಿಸಿ ಪ್ರತಿಪಕ್ಷಗಳು ಆರೋಪಿಸಿದ್ದವು.