ಆಯುಧಪೂಜೆಗೆ ಬಸ್ ತೊಳೆದು ಅಲಂಕಾರ ಮಾಡಿ ಪೂಜೆ ಮಾಡಲು ಕೆಎಸ್ಸಾರ್ಟಿಸಿ ಸಿಬ್ಬಂದಿಗೆ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ.
ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಸಾರಿಗೆ ನಿಗಮ ಪ್ರತಿ ಬಸ್ ಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ ನೀಡಿರುವುದಕ್ಕೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಯೊಂದು ಬಸ್ಸಿನ ಸ್ವಚ್ಛತೆ ಅಲಂಕಾರ ಮತ್ತು ನಿರ್ವಹಣೆಗೆ ಕಡಿಮೆ ಅಂದರೂ 500 ರೂ. ಬೇಕು ಎಂದು ಹೇಳಿದ್ದಾರೆ.
ವರ್ಷವೀಡಿ ಓಡಿಸುವ ಬಸ್ ಚೆನ್ನಾಗಿ ಅಲಂಕಾರ ಮಾಡಲು 100 ರೂ. ಸಾಕಾಗುತ್ತಾ? ಮಾರು ಸೇವಂತಿಗೆ ಹೂವಿಗೆ 70 ರೂ. ಇದೆ. ಇಡೀ ವಾಹನ ಪೂಜೆಗೆ 100 ರೂ. ಸಾಕಾಗುತ್ತಾ? ಅಲ್ಲದೇ ಬಸ್ ತೊಳೆದು ಅಲಂಕಾರ ಮಾಡಲು ಸಾಕಾಗುತ್ತಾ? ಎಂದು ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಶ್ನಿಸಿದ್ದಾರೆ.