ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮದ ವೇಳೆಯೇ ಯಧುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ರಾಜಮನೆತನದಲ್ಲಿ ದಸರಾ ಸಂಭ್ರಮ ಮತ್ತಷ್ಟು ಕಳೆ ನೀಡಿದೆ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಯದಶಮಿಗೆ ಒಂದು ದಿನ ಬಾಕಿಯಿದ್ದು, ದಸರಾ ಜಂಬೂ ಸವಾರಿಗೆ ಸಿದ್ಧತೆ ನಡೆದಿರುವ ಮಧ್ಯೆಯೇ ವಿಜಯ ದಶಮಿಯಂದು ರಾಜವಂಶಸ್ಥ ಯದುವೀರ್ 2ನೇ ಮಗುವಿನ ಜನನವಾಗಿದೆ ತಂದೆಯಾಗಿದ್ದಾರೆ. ಯಧುವೀರ್ ಮತ್ತು ತ್ರಿಷಿಕಾ ದಂಪತಿಗೆ ಈಗಾಗಲೇ ಆದ್ಯವೀರ್ ಎಂಬ ಮಗುವಿದೆ.
ಎರಡನೇ ಮಗುವಿನ ಆಗಮನದ ಸಂಭ್ರಮದ ನಡುವೆ ಯದುವೀರ್ ಖಾಸಗಿ ದರ್ಬಾರ್ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಖಾಸಗಿ ದರ್ಬಾರ್ ನಡೆಸಿರುವ ಯದುವೀರ್ ಶನಿವಾರ ವಿಜಯದಶಮಿಗೆ ಸಿದ್ಧತೆ ನಡೆಸಿರುವಾಗ ಸಿಹಿಸುದ್ದಿ ಬಂದಿದೆ.
ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗಿನ ಜಾವ ನವರಾತ್ರಿ ದಿನವೇ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್ ಒಡೆಯರ್ ಅವರಿಗೆ ತಲುಪಿತು.
ದರ್ಬಾರ್ ಕಂಕಣ ಧರಿಸಿರುವುದರಿಂದ ಯಧುವೀರ್ ಅರಮನೆ ತೊರೆದು ಹೊರಗೆ ಹೋಗುವಂತಿಲ್ಲ. ವಿಜಯದಶಮಿ ಮುಗಿದ ನಂತರ ತಾಯಿ-ಮಗುವನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.