ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ದೇಶಾದ್ಯಂತ ನಡೆಸಿದ ದಾಳಿಯಲ್ಲಿ ಇದುವರೆಗೆ 4650 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಆರಂಭಕ್ಕೂ ಮೊದಲೇ 4650 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದು 2019ರಲ್ಲಿ ಸಿಕ್ಕಿದ ಸಾರ್ವಕಾಲಿಕ ದಾಖಲೆ ಮೊತ್ತಕ್ಕಿಂತ ಅಧಿಕವಾಗಿದೆ.
ಕೇಂದ್ರ ಚುನಾವಣಾಧಿಕಾರಿಗಳು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಮಾರ್ಚ್ 1ರಿಂದ ಇದುವರೆಗೆ ಪ್ರತಿದಿನ 100 ಕೋಟಿಯಂತೆ ಅಕ್ರಮ ಹಣ ಸಾಗಾಟವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದೆ.
2019ರಲ್ಲಿ 3650 ಕೋಟಿ ರೂ. ಪತ್ತೆಯಾಗಿತ್ತು. ಆದರೆ ಈ ಬಾರಿ ಆರಂಭದಲ್ಲೇ ಇಷ್ಟು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಚುನಾವಣೆ ಮುಕ್ತಾಯದ ವೇಳೆಗೆ ಈ ಮೊತ್ತ 10 ಸಾವಿರ ಕೋಟಿ ರೂ. ದಾಟಿದರೂ ಅಚ್ಚರಿಯಿಲ್ಲ ಎಂದು ಅಧಿಕಾರಿಗಳು ಊಹಿಸಿದ್ದಾರೆ.