ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಶವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯಲ್ಲಿ ಪತ್ತೆಯಾಗಿದೆ.
ಗ್ರೀನ್ ಪಾರ್ಕ್ ಪ್ರದೇಶದ ಜಿಮ್ ಟ್ರೈನರ್ ವಿಮಲ್ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮಹಿಳೆಯರ ಶವವನ್ನು ಸರ್ಕಾರಿ ಅಧಿಕಾರಿಗಳಿಗೆ ಮೀಸಲಿಡುವ ರಾಯ್ ಪುರ್ವದ ಪ್ರದೇಶದಲ್ಲಿ ಮಣ್ಣು ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಮಹಿಳೆಯ ಶವವನ್ನು ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಪತ್ತೆ ಹಚ್ಚಲಾಗಿದೆ. ಜೂನ್ 24ರಂದು ನಾಪತ್ತೆಯಾಗಿದ್ದ ಮಹಿಳೆ ಕೊಲೆಯಾಗಿರಬೇಕು ಎಂಬ ಸಂಶಯದ ಮೇರೆಗೆ ನಡೆದ ತನಿಖೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಉದ್ಯಮಿ ಪತ್ನಿಯಾಗಿರುವ ಮಹಿಳೆ ಜಿಮ್ ಟ್ರೈನರ್ ಗೆ ಮದುವೆ ನಿಶ್ಚಯವಾದ ಸುದ್ದಿ ಕೇಳಿದ ಮಹಿಳೆ ಜಿಮ್ ಬಳಿ ಬಂದು ಜಗಳ ಮಾಡಿದ್ದಳು. ಮಹಿಳೆಯನ್ನು ಸಮಾಧಾನಪಡಿಸಿ ಕಾರಿನಲ್ಲಿ ಮಾತುಕತೆ ನಡೆಯುವಾಗ ಜಿಮ್ ಟ್ರೈನರ್ ಕುತ್ತಿಗೆ ಬಳಿ ಬಲವಾಗಿ ಹೊಡೆದಿದ್ದರಿಂದ ಆಕೆ ಮೂರ್ಚೆ ತಪ್ಪಿದಳು.
ಮೂರ್ಚೆ ತಪ್ಪಿದ ಮಹಿಳೆಯನ್ನು ನಂತರ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಕೊಲೆ ಮಾಡಿ ಮಣ್ಣು ಮಾಡಲಾಗಿತ್ತು. ಜಿಮ್ ಟ್ರೈನರ್ ಯಾವುದೇ ಮೊಬೈಲ್ ಫೋನ್ ಬಳಸದೇ ಆಗ್ರಾ, ಪುಣ, ಪಂಜಾಬ್ ಮುಂತಾದ ಕಡೆ ತಲೆಮರೆಸಿಕೊಂಡಿದ್ದರಿಂದ ಆತನ ಪತ್ತೆ ಮಾಡುವುದು ಕಷ್ಟವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.