ಪಾಕಿಸ್ತಾನ ಏಕದಿನ ಮತ್ತು ಟಿ-20 ತಂಡದ ನಾಯಕನಾಗಿ ಮೊಹಮದ್ ರಿಜ್ವಾನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಬಾಬರ್ ಅಜಮ್ ಗೆ ನಾಯಕ ಸ್ಥಾನದಿಂದ ಕೊಕ್ ನೀಡಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹಸಿನ್ ನಖ್ವಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಸೀಮಿತ ಓವರ್ ಗಳ ತಂಡವನ್ನು ಪ್ರಕಟಿಸಿತು.
ಬಾಬರ್ ಅಜಂ ಅವರನ್ನು ಸೀಮಿತ ಓವರ್ ಗಳ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದ್ದು, ಮೊಹಮದ್ ರಿಜ್ವಾಜ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಆಲ್ ರೌಂಡರ್ ಸಲ್ಮಾನ್ ಅಲಿ ಆಘಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಾಬರ್ ಅಜಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮರು ನೇಮಕ ಮಾಡಿತ್ತು. ಆದರೆ ಇದೀಗ ಅವರನ್ನು ನಾಯಕ ಸ್ಥಾನದಿಂದ ವಜಾ ಮಾಡಿ ಅಚ್ಚರಿ ಮೂಡಿಸಿದೆ.
ಚಾಂಪಿಯನ್ಸ್ ಕಪ್ ನ 5 ತಂಡಗಳ ಸಲಹೆಗಾರರ ಜೊತೆ ಚರ್ಚಿಸಿದಾಗ ಮೊಹಮದ್ ರಿಜ್ವಾನ್ ನಾಯಕ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ಮೊಹಸಿನ್ ನಖ್ವಿ ತಿಳಿಸಿದರು.
32 ವರ್ಷದ ರಿಜ್ವಾನ್ ನವೆಂಬರ್ 24ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ಪ್ರವಾಸದಿಂದ ತಂಡವನ್ನು ಮುನ್ನಡೆಸಲಿದ್ದಾರೆ.
ಇದೇ ವೇಳೆ ಪಾಕಿಸ್ತಾನ 25 ಆಟಗಾರರ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದ್ದು, ಎ ಗುತ್ತಿಗೆ ಒಪ್ಪಂದದಲ್ಲಿ ರಿಜ್ವಾನ್ ಮತ್ತು ಬಾಬರ್ ಅವರನ್ನು ಉಳಿಸಿಕೊಳ್ಳಲಾಗಿದೆ. ಉಳಿದ ಆಟಗಾರರನ್ನು ಬಿ ದರ್ಜೆಗೆ ಇಳಿಸಲಾಗಿದೆ.