ಪ್ರವಾಹ ಪೀಡಿತ ವೆಲೆನ್ಸಿಯಾಗೆ ಭೇಟಿ ನೀಡಿದ ಫ್ರಾನ್ಸ್ ರಾಜ ಹಾಗೂ ಪ್ರಧಾನಿಗೆ ಸ್ಥಳೀಯರು ಕೆಸರು ಎರಚಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, ಕನಿಷ್ಠ 200 ಮಂದಿ ಅಸುನೀಗಿದ್ದರು. ವೆಲೆನ್ಸಿಯಾ ನಗರದ ಬಹುತೇಕ ಪ್ರದೇಶ ಮರಳು ಹಾಗೂ ಮಣ್ಣು ತುಂಬಿಕೊಂಡಿದ್ದು, 50 ವರ್ಷಗಳ ನಂತರ ಭೀಕರ ಪ್ರವಾಹ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಸ್ಪೇನ್ ರಾಜ ಫೆಲಿಪ್-4 ಮತ್ತು ರಾಣಿ ಲೆಟಿಜಿಯಾ ಹಾಗೂ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮೇಲೆ ಕೆಸರು ಎರಚಿದ ಸ್ಥಳೀಯರು ಕೊಲೆಗಾರ ಎಂದು ಕೂಗಿ ಕರೆದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರು ಕೆಸರು, ಮಣ್ಣು ಎರಚಿದ್ದರಿಂದ ರಾಜ ಮತ್ತು ರಾಣಿ ಅವರ ಮುಖ ಹಾಗೂ ಬಟ್ಟೆಯ ಮೇಲೆ ಬಿದ್ದಿದೆ. ಕೂಡಲೇ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಲು ಯತ್ನಿಸಿದ್ದಾರೆ. ಇದರಿಂದ ಪ್ರಧಾನಿ ತಮ್ಮ ಭೇಟಿಯನ್ನು ಮೊಟಕುಗೊಳಿಸಿ ಮರಳಿದ್ದಾರೆ.