ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಭಾನುವಾರ ನಡೆದ ಸೂಪರ್ ಸುದೀಪ್ ವೀಕೆಂಡ್ ಕಾರ್ಯಕ್ರಮದಲ್ಲಿ ಹೂಸು ಬಿಡುವ ವಿಷಯದ ಬಗ್ಗೆ ದೊಡ್ಡ ಚರ್ಚೆಯೇ ಆಗಿದ್ದು, ಈ ವಿಷಯದ ಬಗ್ಗೆ ಚರ್ಚೆ ಮಾಡಬೇಕಾಗಿ ಬರುತ್ತೆ ಅಂತ ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಹನುಮಂತು ಆಗಮನದ ನಂತರ ಬಿಗ್ ಬಾಸ್ ಮನೆಗೆ ಆಗಮಿಸಿದ ನಂತರ ಮನೆಯ ವಾತಾವರಣವೇ ಬದಲಾಗಿದೆ. ಮೊದಲ ವಾರವೇ ಪ್ರಾಮಾಣಿಕವಾಗಿ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದೂ ಅಲ್ಲದೇ ಕಿಚ್ಚನ ಚಪ್ಪಾಳೆಯನ್ನು ಹನುಮಂತು ಗಿಟ್ಟಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹನುಮಂತು ಮತ್ತು ಧರ್ಮರಾಜ್ ಕಾಂಬಿನೇಷನ್ ಅದ್ಭುತವಾಗಿ ಕೆಲಸ ಮಾಡುತ್ತಿದ್ದು, ಇವರ ಚೇಷ್ಠೆ, ಕುಚೆಷ್ಟೇ, ಮುಗ್ಧತೆ ಜನರ ಮನಸೆಳೆಯುತ್ತಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನಿಮ್ಮ ಜೀವನದಲ್ಲಿ 63, 64 ಸಂಖ್ಯೆಗೆ ಏನು ಮಹತ್ವ ಇದೆ ಎಂದು ಪ್ರಶ್ನಿಸಿದಾಗ ಧರ್ಮರಾಜ್ ತಬ್ಬಿಬಾದರು. ನೀವು ಇಡೀ ಜೀವನದಲ್ಲಿ ಇಷ್ಟು ಲೆಕ್ಕ ಇಟ್ಟಿರುವ ವಿಷಯ ಅಂದಾಗ ಮತ್ತಷ್ಟು ಗೊಂದಲಕ್ಕೆ ಒಳಗಾದರು. ಆಗ ಸುದೀಪ್ ಕಳೆದೆರಡು ವಾರಗಳಿಂದ ನೀವು ತುಂಬಾ ಲೆಕ್ಕ ಹಾಕುತ್ತಿದ್ದಿರಲ್ಲಾ ಅಂದಾಗ ಭವ್ಯಾ ಗೌಡ, ತ್ರಿವಿಕ್ರಮ, ಹೂಸು, ಹೂಸಪ್ಪ ಎಂದಾಗ ಎಲ್ಲರೂ ಮುಜುಗರಕ್ಕೆ ಒಳಗಾಗಿದ್ದೂ ಅಲ್ಲದೇ ಧರ್ಮರಾಜ್ ಸಾರ್ ಇದೆಲ್ಲಾ ಟೆಲಿಕಾಸ್ಟ್ ಆಗಲ್ಲ ಅಂದುಕೊಂಡಿದ್ದೆ ಎಂದರು.
ನೀವು ಪದೇಪದೆ ಕ್ಯಾಮರಾ ಮುಂದೆ ಬಂದು ಹೂಸಿನ ಲೆಕ್ಕ ಕೊಟ್ಟರೆ ತೋರಿಸದೇ ಇರೋಕೆ ಆಗುತ್ತಾ? ಹನುಮಂತು ಹೂಸಿನ ಲೆಕ್ಕ ಎಲ್ಲಿಗೆ ಬಂತು ಅಂದಾಗ 72ಕ್ಕೆ ಬಂದಿದೆ ಅಂದರು. ಇದಕ್ಕೆ ಸುದೀಪ್, ಹೂಸು ಬಿಡುವ ಸಮಸ್ಯೆಯೋ ಅಥವಾ ಏನಾದರೂ ಅಭ್ಯಾಸವೋ ಎಂದು ಕೇಳಿದಾಗ ಹನುಮಂತು, ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದರಿಂದ ಈ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.
ಅಷ್ಟರಲ್ಲಿ ಭವ್ಯಾ ಗೌಡ, ಸಾರ್ 30-35 ಆದಾಗ ಉದ್ಘಾಟನೆ ಮಾಡಿದರು. ಅದು ನಂಗೆ ಹೇಳೋಕೆ ಆಗಲ್ಲ ನೀವೇ ಹೇಳಿ ಎಂದು ಧನರಾಜ್ ಗೆ ಹೇಳಿದರು. ಇದಕ್ಕೆ ಮತ್ತಷ್ಟು ಆಶ್ಚರ್ಯ ವ್ಯಕ್ತಪಡಿಸಿದ ಸುದೀಪ್, ಹೂಸಿನ ಉದ್ಘಾಟನೆನಾ? ಹೇಗೆ ಮಾಡ್ತೀರಿ? ಸಾಮಾನ್ಯವಾಗಿ ಉದ್ಘಾಟನೆ ಅಂಧರೆ ಎರಡು ಗೋಡೆಗೆ ಟೇಪ್ ಅಂಟಿಸಿ ಕತ್ತರಿಯಿಂದ ಟೇಪ್ ಕಟ್ ಮಾಡುತ್ತಾರೆ. ನೀವು ಟೇಪ್ ಎಲ್ಲಿಗೆ ಹಾಕ್ತೀರಿ. ಏನು ಕಟ್ ಮಾಡ್ತೀರಿ ಅಂದಾಗ ಬಿಗ್ ಬಾಸ್ ಸದಸ್ಯರೆಲ್ಲಾ ಮುಖ ಮುಚ್ಚಿಕೊಂಡು ಜೋರಾಗಿ ನಗಲು ಶುರು ಮಾಡಿದರು.
25 ಸಲ ಹೂಸು ಬಿಟ್ಟಿದ್ದನ್ನು ಸಿಂಪಲ್ಲಾಗಿ ಉದ್ಘಾಟನೆ ಮಾಡಿದೆವು. ಧರ್ಮ ಕೀರ್ತಿರಾಜ್ ಉದ್ಘಾಟಿಸಿದರು ಎಂದು ಧನರಾಜ್ ಹೇಳಿದರು. ಇದಕ್ಕೆ ಧರ್ಮ ಕೀರ್ತಿರಾಜ್, ಹೌದು ನೀವು ಉದ್ಘಾಟನೆ ಮಾಡಬೇಕು ಬನ್ನಿ ಅಂತ ಕರೆದರು. ನಾನು ಏನು ಅಂತ ಹೋದರೆ ಉದ್ಘಾಟನೆ ಮಾಡಿಸಿ ಈಗ 25 ಆಯ್ತು ಅಂದರು ಎಂದು ಹೇಳಿದರು.
ಉದ್ಘಾಟನೆ ಹೇಗೆ ಮಾಡಿದಿರಿ ಅಂದರೆ ಬಲೂನ್ ನಲ್ಲಿ ಹೂಸು ತುಂಬಿಸಿ.. ಎರಡೂ ಕೈಗಳಿಂದ.. ಎಂದು ಸನ್ನೆ ಮಾಡಿದರು. ಇದನ್ನು ಸುದೀಪ್ ಪುನರಾವರ್ತಿಸಿ ಎಂಜಾಯ್ ಮಾಡಿದರು. ಹನುಮಂತು ಕ್ಯಾಪ್ಟನ್ ರೂಮಿಗೆ ಹೋಗಿ ಮಲಗಲು ಎಲ್ಲರೂ ಬಯಸುತ್ತಾರೆ. ಆದರೆ ನೀವು 63 ಬಾರಿ ಹೂಸು ಬಿಟ್ಟ ಪಂಚೆಯಲ್ಲಿ ಅಲ್ಲಿ ಹಾಕಿ. ಹಾಲಲ್ಲಿ ನೆಲದ ಮೇಲೆ ಮಲಗುತ್ತಿರಲ್ಲ. ಸ್ಪರ್ಧಿಗಳಿಗೆ ಗೌರವ ಬೇಡವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.