ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀರಾಮ ಮೂರ್ತಿ ಹಣೆಯನ್ನು ಸೂರ್ಯ ತಿಲಕ ಸ್ಪರ್ಶಿಸಿ ಭಕ್ತರದಲ್ಲಿ ರೋಮಾಂಚನ ಸೃಷ್ಟಿಸಿತು.
ಇಸ್ರೊ ಹಾಗೂ ವಿಜ್ಞಾನಿಗಳ ಸಹಾಯದಿಂದ ಅಳವಡಿಸಲಾದ ತಂತ್ರಜ್ಞಾನದ ಮೂಲಕ ಶ್ರೀರಾಮ ನವಮಿ ಅಂಗವಾಗಿ ವಿಶೇಷವಾಗಿ ಬುಧವಾರ ಮಧ್ಯಾಹ್ನ ಸೂರ್ಯ ತಿಲಕ ಮೂಡಿಸಲಾಯಿತು.
ಸೂರ್ಯನ ಕಿರಣಗಳು ಮಧ್ಯಾಹ್ನ ಕೆಲ ಸಮಯ ಶ್ರೀರಾಮ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಈ ವೇಳೆ ದೇವಸ್ಥಾನದ ಅರ್ಚಕರು ಪೂಜೆ ನೆರವೇರಿಸಿ ಪ್ರಸಾದ ಹಂಚಿದರು.
ಸುಮಾರು 5.8 ಸೆಂಟಿ ಮೀಟರ್ ಸುತ್ತಳತೆಯ ಬೆಳಕು ಶ್ರೀರಾಮನ ಹಣೆಯನ್ನು ಸ್ಪರ್ಶಿಸಿತು. ಮಧ್ಯಾಹ್ನ 12 ಗಂಟೆಯಿಂದ ಸುಮಾರು 3ರಿಂದ 2.5 ನಿಮಿಷಗಳ ಕಾಲ ಬೆಕು ಹಣೆಯ ಮೇಲಿತ್ತು.