Wednesday, November 6, 2024
Google search engine
Homeಕಾನೂನುಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿದ ಚಾಲಕರು ಇತರೆ ವಾಹನ ಚಲಾಯಿಸಲು ಅರ್ಹರು: ಸುಪ್ರೀಂಕೋರ್ಟ್ ಮಹತ್ವದ...

ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿದ ಚಾಲಕರು ಇತರೆ ವಾಹನ ಚಲಾಯಿಸಲು ಅರ್ಹರು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಲಘು ಮೋಟಾರು ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹೊಂದಿದ ಚಾಲಕರು 7,500 ಕೆಜಿಗಿಂ ಕಡಿಮೆ ತೂಕದ ವಾಹನವನ್ನು ಚಲಾಯಿಸಲು ಅರ್ಹರು ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಕ ಪೀಠ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿ ರಾಯ್ ನ್ಯಾಯಮೂರ್ತಿ ಪಿಎಸ್ ನರಸಿಂಹ, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಬುಧವಾರ ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ಭಾರವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹರು ಎಂದು ಆದೇಶ ಹೊರಡಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಲ್‌ಎಂವಿ ಪರವಾನಗಿ ಹೊಂದಿರುವವರು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಅಂಕಿ- ಅಂಶ ಇಲ್ಲ. ಈ ಸಮಸ್ಯೆಯು ಲಘು ಮೋಟಾರು ವಾಹನ ಪರವಾನಗಿ ಹೊಂದಿರುವ ಚಾಲಕರ ಜೀವನೋಪಾಯಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.

ಲಘು ಮೋಟಾರು ವಾಹನ ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿ ಸಾಮರ್ಥ್ಯದ ವಾಹನ ಚಲಾಯಿಸಿ ಅಪಘಾತಗಳಾದಾಗ ವಿಮಾ ಕಂಪನಿಗಳು ಪರಿಹಾರ ಒದಗಿಸಿರಲಿಲ್ಲ. ಈ ವಾಹನಗಳು ಎಲ್‌ವಿಎಂ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದವು. ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ (MACT) ಮತ್ತು ನ್ಯಾಯಾಲಯಗಳು ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ವಿಮಾ ಕ್ಲೈಮ್‌ಗಳನ್ನು ಪಾವತಿಸಲು ಆದೇಶಿಸುತ್ತಿವೆ. ಇದರ ವಿರುದ್ಧ ಬಜಾಜ್ ಅಲೆಯನ್ಸ್ ಸೇರಿದಂತೆ ಹಲವು ವಿಮಾ ಕಂಪೆನಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments