ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷಗಳ ಮೈತ್ರಿಕೂಟ ಪಂಚಸೂತ್ರದ ಪ್ರಣಾಳಿಕೆಗೆ ಪ್ರತಿಯಾಗಿ ಆಡಳಿತ ಮೈತ್ರಿಕೂಟದಿಂದ 10 ಗ್ಯಾರಂಟಿಗಳ ಪ್ರಣಾಳಿಕೆ ಘೋಷಣೆ ಮಾಡಲಾಗಿದೆ.
ಆಡಳಿತರೂಢ ಮೈತ್ರಿಕೂಟ ಮಹಯುತಿ ಪಕ್ಷಗಳಾಗಿರುವ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಮತ್ತು ಬಿಜೆಪಿ 10 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
ಮತ್ತೊಂದೆಡೆ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಮತ್ತು ಉದ್ದವ್ ಠಾಕ್ರೆ ಸಾರಥ್ಯದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಂಗಡಿ ಪಂಚಸೂತ್ರ ಪ್ರಣಾಳಿಕೆ ಘೋಷಿಸಿದೆ.
ಮಹಾಯುತಿ ಮೈತ್ರಿಕೂಟ 10 ಗ್ಯಾರಂಟಿಗಳು
ಲಾಡ್ಲಿ ಬೆಹನ್ ಯೋಜನೆಯ ಮೊತ್ತವನ್ನು 1,500 ರಿಂದ 2,100 ರೂ.ಗೆ ಹೆಚ್ಚಳ ಮತ್ತು 25,000 ಮಹಿಳೆಯರನ್ನು ಪೊಲೀಸ್ ಪಡೆಗೆ ನಿಯೋಜಿಸುವ ಭರವಸೆ.
ರೈತರ ಸಾಲಮನ್ನಾ ಖಾತ್ರಿ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ 12,000 ರಿಂದ 15,000 ರೂ.ಗೆ ಹೆಚ್ಚಳ
ರೈತರ ಬೆಳೆಗಳ ಮೇಲಿನ ಬೆಂಬಲ ಬೆಲೆ ಮೇಲೆ ಶೇ.20ರಷ್ಟು ಸಬ್ಸಿಡಿ
ವೃದ್ಧಾಪ್ಯ ವೇತನ ಮಾಸಿಕ 1,500ರಿಂದ 2,100 ರೂ.ಗೆ ಹೆಚ್ಚಳ
ಅಗತ್ಯ ವಸ್ತುಗಳ ಬೆಲೆಯಲ್ಲಿ ಸ್ಥಿರತೆ
25 ಲಕ್ಷ ಉದ್ಯೋಗ ಸೃಷ್ಟಿ ಮತ್ತು ತಿಂಗಳಿಗೆ 10,000 ರೂ. ಶಿಕ್ಷಣ ಭತ್ಯೆ, 10 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ಭರವಸೆ
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ 15 ಸಾವಿರ ರೂ.ಗೆ ಏರಿಕೆ ಹಾಗೂ ವಿಮೆ ರಕ್ಷಣೆ
ಗ್ರಾಮೀಣ ಪ್ರದೇಶಗಳಲ್ಲಿ 45,000 ಸಂಪರ್ಕ ರಸ್ತೆಗಳು
30ರಷ್ಟು ವಿದ್ಯುತ್ ಬಿಲ್ ಕಡಿತ
ವಿಷನ್ ಮಹಾರಾಷ್ಟ್ರ 2029 100 ದಿನಗಳಲ್ಲಿ ಪೂರ್ಣ
ವಿಕಾಸ್ ಅಂಗಡಿ ಪಂಚಸೂತ್ರ ಪ್ರಣಾಳಿಕೆ
ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 3,000 ರೂ. ಮತ್ತು ಉಚಿತ ಬಸ್ ಪ್ರಯಾಣ
ರೈತರಿಗೆ 3 ಲಕ್ಷ ರೂ.ವರೆಗೆ ಸಾಲ ಮತ್ತು ಸಕಾಲದಲ್ಲಿ ಸಾಲ ಮರುಪಾವತಿಸಲು 50,000 ರೂ. ಪ್ರೋತ್ಸಾಹ ಧನ
ಜಾತಿವಾರು ಜನಗಣತಿ ನಡೆಯಲಿದ್ದು, ಇದರಲ್ಲಿ ಶೇ.50 ಮೀಸಲಾತಿ ಮಿತಿಯನ್ನು ತೆಗೆದುಹಾಕಲು ಪ್ರಯತ್ನ
25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧಗಳು
ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ.ವರೆಗೆ ಆರ್ಥಿಕ ನೆರವು.