ರದ್ದುಗೊಂಡಿರುವ 370ನೇ ವಿಧಿಯನ್ನು ಮರಳಿ ಜಾರಿಗೆ ತರಬೇಕು ಎಂಬ ಬ್ಯಾನರ್ ಪ್ರದರ್ಶನವನ್ನು ಖಂಡಿಸಿ ಬಿಜೆಪಿ ಸದಸ್ಯರು ಗದ್ಧಲ ಸೃಷ್ಟಿಸಿದ್ದರಿಂದ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
6 ವರ್ಷಗಳ ನಂತರ ನಡೆದ ಮೊದಲ ಜಮ್ಮ ಕಾಶ್ಮೀರ ವಿಧಾನಸಭೆ ಅಧಿವೇಶನದಲ್ಲಿ ಜೈಲಿನಲ್ಲಿರುವ ಸಂಸದ ಇಂಜಿನಿಯರ್ ರಶೀದ್ ಅವರ ಸೋದರ ಖುರ್ಷಿದ್ ಅಹ್ಮದ್ ಶೇಖ್ ಗುರುವಾರ 370ನೇ ವಿಧಿ ಮರು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಬ್ಯಾನರ್ ಪ್ರದರ್ಶಿಸಿದರು.
ಬ್ಯಾನರ್ ಪ್ರದರ್ಶಿಸಿರುವುದನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ ಬ್ಯಾನರ್ ಹರಿಯಲು ಮುಂದಾದರು. ಈ ವೇಳೆ ಆಡಳಿತಾರೂಢ ಪಕ್ಷದ ಸದಸ್ಯರು ಹಾಗೂ ಬಿಜೆಪಿ ನಡುವೆ ಘರ್ಷಣೆ ಉಂಟಾಗಿದ್ದು, ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಬಿಜೆಪಿ ಪ್ರತಿಪಕ್ಷ ನಾಯಕ ಸುನೀಲ್ ಶರ್ಮ 370ನೇ ವಿಧಿ ರದ್ದು ಕುರಿತು ಮಾತನಾಡುತ್ತಿದ್ದಾಗ ಅವಾಮಿ ಲೆಟ್ಟಿಯಾಡ್ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಬಾವಿಗೆ ಹಾರಿ ಬ್ಯಾನರ್ ಪ್ರದರ್ಶಿಸಿದರು. ಇದರಿಂದ ಅಸಮಾಧಾಗೊಂಡ ಬಿಜೆಪಿ ಸದಸ್ಯರು ಬ್ಯಾನರ್ ಹರಿಯಲು ಮುಂದಾದರು.
ಬಿಜೆಪಿ ಸದಸ್ಯರನ್ನು ಮಾರ್ಷಲ್ ಗಳು ಬಂದು ಸಭೆಯಿಂದ ಹೊರಗೆ ಹಾಕಿದರು. ಕೋಲಾಹಲದ ಹಿನ್ನೆಲೆಯಲ್ಲಿ ಸ್ಪೀಕರ್ ಅಬ್ದುಲ್ ರಹೀಂ ರಾಧರ್ 5 ದಿನಗಳ ವಿಧಾನಸಭೆ ಅಧಿವೇಶನವನ್ನು ಮುಂದೂಡಿದರು.