ಪುರುಷರು ಮಹಿಳೆಯರ ಅಳತೆ ಪಡೆದು ಬಟ್ಟೆ ಹೊಲಿಯಬಾರದು ಹಾಗೂ ಕೇಶ ವಿನ್ಯಾಸ ಮಾಡಬಾರದು ಎಂಬ ನಿಯಮ ಜಾರಿಗೆ ತರುವಂತೆ ಉತ್ತರ ಪ್ರದೇಶದ ಮಹಿಳಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಮಹಿಳೆಯರಿಗೆ ಕೆಟ್ಟ ಸ್ಪರ್ಶದಂತಹ ಲೈಂಗಿಕ ದೌರ್ಜನ್ಯ ಹಾಗೂ ಪುರುಷರ ಕೆಟ್ಟ ಉದ್ದೇಶಗಳನ್ನು ತಡೆಯಲು ಈ ನಿಯಮಗಳನ್ನು ಜಾರಿಗೆ ತರಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಅಕ್ಟೋಬರ್ 28ರಂದು ನಡೆದ ಮಹಿಳಾ ಆಯೋಗದ ಸಭೆಯಲ್ಲಿ ಪುರುಷರು ಬಟ್ಟೆ ಹೊಲಿಯಲು ಅಳತೆ ಪಡೆಯುವುದು ಹಾಗೂ ಟೇಲರ್ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ತೀರ್ಮಾನಿಸಲಾಗಿದೆ.
ಮಹಿಳೆಯರ ಬಟ್ಟೆಗಳನ್ನು ಹೊಲಿಯುವುದು ಹಾಗೂ ಅಳತೆ ಪಡೆಯುವುದನ್ನು ಮಹಿಳೆಯರೇ ಮಾಡಬೇಕು ಹೊರತು ಪುರುಷರು ಮಾಡಬಾರದು. ಅಲ್ಲದೇ ಟೈಲರ್ ಗಳ ಮೇಲೆ ನಿಗಾ ಇಡಲು ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಮಹಿಳಾ ಆಯೋಗದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್ ಈ ವಿಷಯ ತಿಳಿಸಿದ್ದು, ಟೈಲರ್ ಅಂಗಡಿಯಲ್ಲಿ ಮಾತ್ರವಲ್ಲ, ಸಲೂನ್ ಗಳಲ್ಲಿ ಮಹಿಳಾ ಗ್ರಾಹಕರಿಗೆ ಮಹಿಳೆಯರೇ ಸೇವೆ ಮಾಡಬೇಕು. ಪುರುಷರು ಅಗತ್ಯವಿಲ್ಲ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದ್ದಾರೆ.