ದೇಶದಲ್ಲೇ ಅತೀ ಹೆಚ್ಚು ಬೇಡಿಕೆ ಹೊಂದಿರುವ ಸೇಡಾನ್ ಕಾರುಗಳ ಪೈಕಿ ಮಂಚೂಣಿಯಲ್ಲಿರುವ ಮಾರುತಿ ಸುಜುಕಿ ಡಿಜೈರ್ ನ 4ನೇ ತಲೆಮಾರಿನ ಅವತರಣಿಕೆಯನ್ನು ನವೆಂಬರ್ 11ರಂದು ಬಿಡುಗಡೆ ಮಾಡಲಿದೆ.
ನವೀಕರಣಕ್ಕಾಗಿ ದೀರ್ಘ ಸಮಯ ಪಡೆದ ಮಾರುತಿ ಸುಜುಕಿಯು 4ನೇ ತಲೆಮಾರಿನ ಡಿಜೈರ್ ನವೆಂಬರ್ 11 ರಂದು ದೇಶದಲ್ಲಿ ಅಧಿಕೃತವಾಗಿ ಪರಿಚಯಿಸಲಾಗುತ್ತಿದ್ದು, ಹೋಂಡಾ ಅಮೇಜ್ ಪ್ರತಿಸ್ಪರ್ಧಿಗಾಗಿ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿವೆ.
ಆಸಕ್ತ ಖರೀದಿದಾರರು ತಮ್ಮ ಕಾರುಗಳನ್ನು ಮಾರುತಿ ಸುಜುಕಿ ವೆಬ್‌ಸೈಟ್ ಅಥವಾ ಯಾವುದೇ ಡೀಲರ್‌ಶಿಪ್ ಮೂಲಕ ಪ್ರಿ-ಬುಕ್ ಮಾಡಬಹುದು.
ಇದೇ ವೇಳೆ ಮಾರುತಿ ಸುಜುಕಿ ಡಿಜೈರ್ ನ ಮೈಲೇಜ್ ಸೇರಿದಂತೆ ಪ್ರಮುಖ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಕ್ರ್ಯಾಶ್ ಟೆಸ್ಟ್ ರೇಟಿಂಗ್ ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5 ಅಂಕ ಗಿಟ್ಟಿಸಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಜಪಾನ್ ಎನ್‌ಸಿಎಪಿ ಮೂಲಕ 4-ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಪಡೆದುಕೊಂಡಿದೆ, ಡಿಜೈರ್ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿಯ ಪರೀಕ್ಷಾ ಹಾಸಿಗೆಯಲ್ಲಿದೆ. ಅಲ್ಲದೇ ಗರಿಷ್ಠ 25.71 ಕಿ.ಮೀ. ಮೈಲೇಜ್ ನೀಡಲಿದ್ದು, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಲಿದೆ.
ಎಎಂಟಿ ಗೇರ್ ಬಾಕ್ಸ್ ಜೊತೆಗಿನ ಮ್ಯಾನ್ಯಯೆಲ್ ಗೇರ್ ಬಾಕ್ಸ್ ಹೊಂದಿದ ಕಾರುಗಳು 24.79 ಕಿ.ಮೀ. ಮೈಲೇಜ್ ನೀಡಿದರೆ, ಸಿಎನ್ ಜಿ ಕಾರುಗಳು ಗರಿಷ್ಠ 33.73 ಕಿ.ಮೀ. ನೀಡುತ್ತದೆ.
ಗ್ಯಾಲೆಟ್ ರೆಡ್, ನೆಟ್ ಬಗ್ ಬ್ರೌನ್, ಅಲುರಿಂಗ್ ಬ್ಲೂ, ಬ್ಲೂಯಿಷ್ ಬ್ಲಾಕ್, ಮಗ್ಮಾ ಗ್ರೇ, ಅರ್ಸಿಟಿಕ್ ವೈಟ್ ಮತ್ತು ಸ್ಪೆಂಡೆಡ್ ಸಿಲ್ವರ್ ಸೇರಿದಂತೆ 7 ಬಣ್ಣಗಳಲ್ಲಿ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ.