ವರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇಂದಿನಿಂದ ೨ ತಿಂಗಳ ಕಾಲ ಭಕ್ತರಿಗೆ ದರ್ಶನ ನೀಡಲಿದೆ.
ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ಸ್ತಾಮಿ ದೇವಸ್ಥಾನ ಶುಕ್ರವಾರ ಸಂಜೆ ನಡೆಯುವ ಮಂಡಲ ಮಕರ ವಿಲಕ್ಕು ಪೂಜೆ ನಂತರ ಬಾಗಿಲು ತೆರೆಯಲಿದೆ.
ಮಹಾ ಮಂಡಲ ಮಕರ ವಿಲಕ್ಕು ಉತ್ಸವ ಶುಕ್ರವಾರ ಸಂಜೆ ಆರಂಭವಾಗಲಿದ್ದು, ಡಿಸೆಂಬರ್ 26ರವರೆಗೆ ದರ್ಶನ ದೊರೆಯಲಿದೆ. ಅರನ್ ಮುಲಾ ಪಾರ್ಥಸಾರಥಿ ದೇವಸ್ಥಾನದಿಂದ ಒಡವೆಗಳನ್ನು ತಂದು ಅಯ್ಯಪ್ಪನಿಗೆ ಅಲಂಕರಿಸುವ ಮೂಲಕ ಮೊದಲ ಹಂತದ ದರ್ಶನ ಮುಕ್ತಾಯವಾಗಲಿದೆ. ಎರಡನೇ ಹಂತದ ದರ್ಶನ ಡಿಸೆಂಬರ್ 30ರಿಂದ ಜನವರಿ 20ರವರೆಗೆ ನಡೆಯಲಿದೆ.
ಅಯ್ಯಪ್ಪನ ಭಕ್ತರಿಗೆ ಪೂರ್ಣ ಪ್ರಮಾಣದಲ್ಲಿ ದರ್ಶನ ನೀಡುವ ಕಾಲ ಇದ್ದಾಗಿದ್ದು, ಸಂಕ್ರಾಂತಿ ದಿನ ಭಕ್ತರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ. ಜನವರಿ 15ರಂದು ಮಕರವಿಲ್ಲಕ್ಕು ದಿನ ಮಹತ್ವದ ಪೂಜೆ ನಡೆಯಲಿದ್ದು, ಅಂದು ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಲಿದ್ದಾರೆ.
ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಕೇರಳ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಅಯ್ಯಪ್ಪ ಭಕ್ತರ ದರ್ಶನಕ್ಕಾಗಿ ಹೆಚ್ಚುವರಿ ಸಮಯ ಕೂಡ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರಿಗಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಶಬರಿಮಲೆ ಅಯ್ಯಪ್ಪ ದರ್ಶನ ಸಮಯ ಮುಂಜಾನೆ 3 ಗಂಟೆಯಿಂದ ಮಧ್ಯಾಹ್ನ 1 ಮತ್ತು ಸಂಜೆ 3 ಗಂಟೆಯಿಂದ ತಡರಾತ್ರಿ 11 ಗಂಟೆಯವರೆಗೆ ದೊರೆಯಲಿದೆ.