ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಬೌಲಿಂಗ್ ಕೋಚ್ ಓಂಕಾರ್ ಸಾಳ್ವಿ ನೇಮಕಗೊಂಡಿದ್ದಾರೆ.
ಕಳೆದ ಆವೃತ್ತಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿದ್ದ ಓಂಕಾರ್ ಸಾಳ್ವಿ ಅವರನ್ನು 2025ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತಂಡದ ಬೌಲಿಂಗ್ ಕೋಚ್ ಆಗಿ ಆರ್ ಸಿಬಿ ನೇಮಕ ಮಾಡಿದೆ.
ಓಂಕಾರ್ ಸಾಳ್ವಿ ರಣಜಿ ಮತ್ತು ಇರಾನಿ ಟ್ರೋಫಿಯಲ್ಲಿ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 8 ತಿಂಗಳಲ್ಲಿ 8 ಟ್ರೋಫಿ ಗೆದ್ದ ತಂಡದಲ್ಲಿದ್ದಾರೆ. ಇದೀಗ ಈ ಸಾಧನೆಯನ್ನು ಐಪಿಎಲ್ ನಲ್ಲಿ ಆರ್ ಸಿಬಿ ತಂಡದಲ್ಲಿ ಮುಂದುವರಿಸುವರೇ ಎಂಬುದು ಕಾದು ನೋಡಬೇಕಿದೆ.
ಪ್ರಸ್ತುತ ಮುಂಬೈ ತಂಡದಲ್ಲಿರುವ ಓಂಕಾರ್ ಸಾಳ್ವಿ ದೇಶೀಯ ಟೂರ್ನಿಗಳು ಮುಕ್ತಾಯಗೊಂಡ ನಂತರ ಆರ್ ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಓಂಕಾರ್ ಕಳೆದ 8 ತಿಂಗಳಲ್ಲಿ ರಣಜಿ, ಇರಾನಿ ಮತ್ತು ಐಪಿಎಲ್ ಸೇರಿದಂತೆ 8 ಪ್ರಶಸ್ತಿ ಗೆದ್ದಿದ್ದಾರೆ. ಬೌಲಿಂಗ್ ಕೋಚ್ ಆದ ನಂತರ ಮುಂಬೈ ತಂಡ 8 ವರ್ಷಗಳ ನಂತರ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು.
ಮುಂಬೈ ಮತ್ತು ವಿದರ್ಭ ನಡುವಿನ ರಣಜಿ ಫೈನಲ್ ಪಂದ್ಯಕ್ಕೂ ಮುನ್ನ ಅಜಿಂಕ್ಯ ರಹಾನೆ ಬೌಲಿಂಗ್ ಕೋಚ್ ಆಗಿ ಭಾರತ ತಂಡಕ್ಕೆ ಬರಬೇಕು ಎಂದು ಶಿಫಾರಸ್ಸು ಮಾಡಿದ್ದರು.