ಚೀನಾದ ಅರ್ಧದಷ್ಟು ನಗರಗಳು ಜನಸಂಖ್ಯೆ ಹೆಚ್ಚಳ, ಬೃಹತ್ ಕಟ್ಟಡಗಳ ನಿರ್ಮಾಣದ ಒತ್ತಡ ತಾಳಲಾರದೇ ನೀರಿನಲ್ಲಿ ಮುಳುಗಲಿವೆ ಎಂದು ಸಂಶೋಧನಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ರಾಜಧಾನಿ ಬೀಜಿಂಗ್, ತೈಂಜಿನ್ ಸೇರಿದಂತೆ ಚೀನಾದ ಹಲವಾರು ನಗರಗಳು ಅಂದರೆ ಸುಮಾರು ಶೇ.45ರಷ್ಟು ನಗರಗಳು ನಿರೀಕ್ಷೆಗೂ ಮೀರಿ 3 ಮಿ.ಮೀ.ನಷ್ಟು ಭೂಮಿ ಮುಳುಗಡೆ ಆಗುತ್ತಿದ್ದು, ಇದು ಮುಂದುವರಿದರೆ ಶೀಘ್ರದಲ್ಲೇ ನೀರಿನಲ್ಲಿ ಮುಳುಗಲಿವೆ ಎಂದು ಎಚ್ಚರಿಸಿವೆ.
ಸಾಮಾನ್ಯವಾಗಿ ಪ್ರತಿ ವರ್ಷ 10 ಮಿ.ಮೀ. ನಷ್ಟು ಭೂಮಿ ನೀರಿನೊಳಗೆ ಜಾರುತ್ತಿದೆ. ಇದು ಶೇ.16ರಷ್ಟು ಮಾತ್ರ ಆಗಿದೆ. ಆದರೆ ಇತ್ತೀಚೆಗೆ 3 ಮಿ.ಮೀ. ಹೆಚ್ಚು ಮುಳುಗುತ್ತಿವೆ ಎಂದು ಜನರಲ್ ಪತ್ರಿಕೆಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.
20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 82 ನಗರಗಳನ್ನು ಸಂಶೋಧನೆ ಮಾಡಲಾಗಿದ್ದು, 2015ರಿಂದ 2022ರ ಅವಧಿಯಲ್ಲಿ ಈ ರೀತಿಯ ನಗರಗಳು ನಿರೀಕ್ಷೆಗೂ ಮೀರಿ ವೇಗವಾಗಿ ಮುಳುಗಡೆ ಆಗುತ್ತಿವೆ. ಕೆಲವು ನಗರಗಳು ಅತ್ಯಂತ ವೇಗವಾಗಿ ಮುಳುಗಡೆ ಆಗುತ್ತಿದ್ದು, 10 ಮಿ.ಮೀ.ವರೆಗೂ ಇದೆ. ಚೀನಾದ ಅತ್ಯಂತ ದೊಡ್ಡ ನಗರಿ ಶಾಂಘೈ ಒಂದು ಶತಮಾನದಲ್ಲಿ 3 ಮೀ.ನಷ್ಟು ಮುಳುಗಡೆ ಆಗಿದೆ. ಬೀಜಿಂಗ್ 45 ಮಿ.ಮೀ. ಮುಳುಗಿದೆ ಎಂದು ತಜ್ಞರು ವಿವರಿಸಿದ್ದಾರೆ.
ಭೂಮಿ ಮೇಲಿನ ಭಾರ ಹೆಚ್ಚಳ ಅಲ್ಲದೇ ಮನುಷ್ಯರ ಚಟುವಟಿಕೆಗಳು ಕೂಡ ಗಾಢ ಪರಿಣಾಮ ಭೀರುತ್ತಿದೆ. ಇದರಿಂದ ಭೂಮಿ ಕೆಳಗಿನ ನೀರಿನ ಅಂಶ ಕಡಿಮೆ ಆಗುತ್ತಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.