Thursday, November 21, 2024
Google search engine
HomeUncategorizedBidar: ಬಸವಕಲ್ಯಾಣದ ಅನುಭವ ಮಂಟಪ ಉತ್ಸವಕ್ಕೆ 40 ಸಾವಿರ ಹೋಳಿಗೆ ಅರ್ಪಿಸಿದ ಭಕ್ತರು!

Bidar: ಬಸವಕಲ್ಯಾಣದ ಅನುಭವ ಮಂಟಪ ಉತ್ಸವಕ್ಕೆ 40 ಸಾವಿರ ಹೋಳಿಗೆ ಅರ್ಪಿಸಿದ ಭಕ್ತರು!

ಬೀದರ್ ಜಿಲ್ಲೆಯ ಔರಾದ್ ನಲ್ಲಿ ನವೆಂಬರ್ 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯಲಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ತಾಲೂಕಿನ ಭಕ್ತರು 40 ಸಾವಿರ ಹೋಳಿಗೆ ಅರ್ಪಿಸಿದ್ದಾರೆ.

ಔರಾದ್ ತಾಲೂಕಿನ ಭಕ್ತರು ವಿಶೇಷ ಉಪಹಾರ ಶೇಂಗಾ ಹೋಳಿಗೆ, ಜೋಳದ ಹಿಟ್ಟಿನ ದಪಾಟಿ ಉಣಬಡಿಸಲು ಭಕ್ತರು ನೀಡಿದ ದೇಣಿಗೆಯಿಂದ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು. ತಾಲೂಕಿನಲ್ಲಿ ದೇಣಿಗೆ ನೀಡಲು ಸ್ವಹಿತಾಸಕ್ತಿಯಿಂದ ಮುಂದೆ ಬರುತ್ತಿದ್ದಾರೆ.

rotti
rotti

ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು. ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಜನರಿಗೆ ಶೇಂಗಾ ಹೋಳಿಗೆ, ತುಪ್ಪ ಹಾಗೂ ಜೋಳದ ಹಿಟ್ಟಿನ ದಪಾಟಿ ಸವಿ ಉಣಬಡಿಸಲು ಔರಾದ್ ಭಕ್ತರು ಸಜ್ಜಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಪಟ್ಟಣದ ಬಸವ ಗುರುಕುಲ ಶಾಲೆಯ ಆವರಣದಲ್ಲಿ 35-40 ಜನ ಮಹಿಳೆಯರು ಶೇಂಗಾ ಹೋಳಿಗೆ, ದಪಾಟಿ ಮಾಡುತ್ತಿದ್ದಾರೆ. ಅಲ್ಲದೇ 2 ಕ್ವಿಂಟಲ್ ತುಪ್ಪ ಸಂಗ್ರಹವಾಗಿದೆ. ಇನ್ನೂ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಬಹುದು ಎನ್ನಲಾಗುತ್ತಿದೆ.

rotti
rotti

ಔರಾದ್ ತಾಲೂಕಿಗೂ ಹಿರೇಮಠ ಸಂಸ್ಥಾನಕಕ್ಕೂ ಹಿಂದಿನಿಂದಲೂ ಅನನ್ಯ ಸಂಬಂಧವಿದ್ದು, ಶ್ರೀಗಳ ಎಲ್ಲ ಕಾರ್ಯಕ್ಕೂ ಸೈ ಎನ್ನುವ ಭಕ್ತರ ಪಡೆಯೇ ಇಲ್ಲಿದೆ ಎಂದು ಇಲ್ಲಿಯ ಭಕ್ತರು ಸಾಬೀತು ಮಾಡಿದ್ದಾರೆ. ಸಾರ್ವಜನಿಕರು ಸ್ವ ಹಿತಾಸಕ್ತಿಯಿಂದ ದೇಣಿಗೆ ನೀಡಿದ ಹಣದಿಂದ ಹೋಳಿಗೆ, ದಪಾಟಿ ತಯಾರಿಸಿ ಉತ್ಸವಕ್ಕೆ ದಾಸೋಹ ನೀಡಲು ಸಿದ್ದರಾಗಿದ್ದಾರೆ.

ಪಟ್ಟಣದ ನಾನಾ ಬಡಾವಣೆಯ ಮಹಿಳೆಯರು ಸೇರಿಕೊಂಡು ಹೋಳಿಗೆ, ದಪಾಟಿ ಮಾಡುತ್ತಿದ್ದೇವೆ. ಐತಿಹಾಸಿಕ ಉತ್ಸವಕ್ಕೆ ಅಲ್ಪ ಪ್ರಮಾಣದ ಶ್ರಮ ಮಾಡಲು ಅವಕಾಶ ದೊರೆತಿದೆ ಎನ್ನುತ್ತಾರೆ ಕವಿತಾ ಮತ್ತು ಸಂಗಡಿಗರು.
ಸಿದ್ದಪಡಿಸಿದ ಶೇಂಗಾ ಹೋಳಿಗೆ, ದಪಾಟಿ, ತುಪ್ಪವನ್ನು ನ. 22 ರಂದು ಬಸವಕಲ್ಯಾಣಕ್ಕೆ ಕಳುಹಿಸಲಾಗುತ್ತದೆ ಎಂದು ಹಿರಿಯ ಜೀವಿ ಮನ್ಮಥಪ್ಪ ಬಿರಾದಾರ್, ಪ್ರಕಾಶ ಘೂಳೆ, ರವೀಂದ್ರ ಮೀಸೆ, ಸಂದೀಪ ಮೀಸೆ, ನಂದು ಜಿರಗೆ, ಬಂಡೆಪ್ಪ ದ್ಯಾಡೆ, ಗುರುನಾಥ ಕಸ್ತೂರೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments