ಲಂಚದ ಆಮೀಷವೊಡ್ಡಿದ್ದಕ್ಕಾಗಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸುತ್ತಿದ್ದಂತೆ ಅದಾನಿ ಗ್ರೂಪ್ ಕಂಪನಿಗಳ ಷೇರು ಕೆಲವೇ ಗಂಟೆಯಲ್ಲಿ ಶೇ.20ರಷ್ಟು ಕುಸಿತ ಕಂಡಿವೆ.
ಅಮೆರಿಕದ ನ್ಯೂಯಾರ್ಕ್ ನ್ಯಾಯಾಲಯ ಬಹುಕೋಟಿ ಲಂಚದ ಆಮೀಷ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಹಾಗೂ ಸೋದರಳಿಯ ಸಾಗರ್ ಅದಾನಿ ಸೇರಿದಂತೆ 8 ಮಂದಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.
ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಅಮೆರಿಕದಲ್ಲಿರುವ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2338 ಕೋಟಿ ರೂ. ಲಂಚ ನೀಡಲು ಮುಂದಾದ ಆರೋಪದ ಮೇಲೆ ನ್ಯೂಯಾರ್ಕ್ ನ್ಯಾಯಾಲಯ ಬಂಧನ ಆದೇಶ ಹೊರಡಿಸಿದ್ದು, ಈ ವಾರೆಟ್‌ಗಳನ್ನು ಜಾರಿಗೊಳಿಸಲು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ.
ಅಮೆರಿಕದ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಅದಾನಿ ಒಡೆತನದ ಕಂಪನಿಗಳು ಪ್ರಪಾತಕ್ಕೆ ಕುಸಿದಿದ್ದರಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಅದಾನಿ ಕಂಪನಿಗಳು ಒಟ್ಟಾರೆ ಶೇ.20ರಷ್ಟು ಕುಸಿತ ಕಂಡಿದ್ದರಿಂದ 12 ಸಾವಿರ ಕೋಟಿಗೂ ಅಧಿಕ ನಷ್ಟವುಂಟಾಗಿದೆ ಎಂದು ಹೇಳಲಾಗಿದೆ.
ಅತೀ ಹೆಚ್ಚು ನಷ್ಟ ಅನುಭವಿಸಿದ್ದು ಎಲ್ ಐಸಿ ಕಂಪನಿ. ಅದಾನಿ ಬಂದರು ಸ್ಟೋಕ್ಸ್ ಷೇರುಗಳು ಕುಸಿದಿದ್ದರಿಂದ ೫,೦೦೯.೮೮ ಕೋಟಿ ರೂ. ನಷ್ಟ ಉಂಟಾಗಿದೆ. ಅದಾನಿ ಎಂಟರ್ ಪ್ರೈಸಸ್ ಕಂಪನಿ ೨೦೧೨.೧೨ ಕೋಟಿ ರೂ. ಹಾಗೂ ಅಂಬುಜಾ ಸೀಮೆಂಟ್ಸ್ ಕಂಪನಿ ೧೨೦೭.೯೩ ಕೋಟಿ ರೂ. ನಷ್ಟ ಅನುಭವಿಸಿದೆ.
ಅದಾನಿ ಟೊಟಲ್ ವಿಮಾ ಕಂಪನಿ ೮೦೭ ಕೋಟಿ, ಅದಾನಿ ಎನರ್ಜಿ ಸೊಲುಷನ್ಸ್ ೭೧೬.೪೫ ಕೋಟಿ, ಅದಾನಿ ಗ್ರೀನ್ ಎನರ್ಜಿ ೫೯೨.೦೫ ಕೋಟಿ, ಎಸಿಸಿ ಸೀಮೆಂಟ್ಸ್ ೩೮೧.೬೬ ಕೋಟಿ ರೂ. ನಷ್ಟ ಅನುಭವಿಸಿದೆ.