1999ರಲ್ಲಿ ನ್ಯಾಟೋ ಹಾಕಿದ್ದ 1000 ಕೆಜಿ ತೂಕದ ಬಾಂಬ್ ಸರ್ಬಿಯಾದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳು ಸಮೀಪದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ.
ದಕ್ಷಿಣ ಸರ್ಬಿಯಾದ ನಿಸಾ ಎಂಬ ನಗರದಲ್ಲಿ 1000 ಕೆಜಿ ತೂಕದ (2200 ಪೌಂಡ್) ಬಾಂಬ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಟ್ಟಡದ ಕಾಮಗಾರಿ ವೇಳೆ ಈ ಬಾಂಬ್ ಪತ್ತೆಯಾಗಿದ್ದು, ಸುರಕ್ಷಿತ ಸ್ಥಳಕ್ಕೆ ಬಾಂಬ್ ರವಾನಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಸಚಿವಾಲಯ ವಿವರಿಸಿದೆ.
ಎಂಕೆ-48 ಹೆಸರಿನ ಬಾಂಬ್ ಇದಾಗಿದ್ದು, ಇದರ ತೂಕ ಸುಮಾರು 430 ಕೆಜಿ ಆಗಿತ್ತು. 1999, ಮಾರ್ಚ್ 24ರಿಂದ ಸರ್ಬಿಯಾ ಮೇಲೆ ನ್ಯಾಟೊ ಸತತ 78 ದಿನಗಳ ಬಾಂಬ್ ದಾಳಿ ನಡೆಸಿತ್ತು.