ಕಾರ್ಮೋಡ ಕವಿದಿತ್ತೋ, ಕೆರೆ – ಕಟ್ಟೆ, ನದಿಗಳು ತುಂಬಿ ಹರಿದಾವೋ, ಗಗನದಿ ಮುತ್ತು ಸುರಿದಾವೋ ಎಂದು ದಾವಣಗೆರೆ ಜೆಲ್ಲೆಯ ಚನ್ನಗಿರಿ ತಾಲೂಕಿನ ಹರಪನಹಳ್ಳಿ – ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕ ನುಡಿದಿದೆ.
ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳುಕಲಿವೆ ಎಂದು ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕವನ್ನ ವಿಶ್ಲೇಷಿಸಿದ್ದಾರೆ.
ಇದೇ ವೇಳೆ ವಿಜಯಪುರ ಜಿಲ್ಲೆಯ ಎಂದು ಕೊಡೆಕಲ್ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದು, ರಾಜ್ಯದಲ್ಲಿ ಮಳೆ ಬೆಳೆ ಈ ಬಾರಿ ಚೆನ್ನಾಗಿ ಆಗುತ್ತದೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆಯಾಗುತ್ತದೆ, ವಾತಾವರಣದಲ್ಲಿ ವ್ಯತ್ಯಾಸವಾಗಿ ಗಾಳಿಯ ರಭಸವು ಹೆಚ್ಚಾಗಿದೆ ಎಂದಿದ್ದಾರೆ.
ಈ ವೇಳೆ ದೇವಸ್ಥಾನದ ಮುಖ್ಯಗುರು ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕ್ರೋಧಿನಾಮ ಸಂವತ್ಸರದ ಕಾಲಮಾನ ಪ್ರಸ್ತುತ ಕಾರ್ಣಿಕ ನುಡಿಗಳನ್ನು ಹೇಳಿದರು. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ.
ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳಿರುತ್ತವೆ. ವಿಶ್ವದಲ್ಲಿ ನಮ್ಮ ದೇಶ ಹೆಸರು ತರುತ್ತದೆ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳವಾಗುತ್ತದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎಂದು ಕಾರ್ಣಿಕ ನುಡಿದರು.